Saturday, September 26, 2026

BDA Apartments

ಹಾಲಿನ ಡೇರಿ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ: ಮಾಜಿ ಪ್ರಧಾನಿ ಹೆಚ್.ಡ...
Home Front Page ಹಾಲಿನ ಡೇರಿ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ: ಮಾಜಿ ಪ್ರಧಾನಿ ಹೆಚ್.ಡಿಡಿ ಸೇರಿ...

ಹಾಲಿನ ಡೇರಿ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ: ಮಾಜಿ ಪ್ರಧಾನಿ ಹೆಚ್.ಡಿಡಿ ಸೇರಿ ಹಲವರು ಭಾಗಿ.

ಮಂಡ್ಯ,ಡಿಸೆಂಬರ್,30,2022(www.justkannada.in): ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ನಿರ್ಮಾಣವಾಗಿರುವ ಮೆಗಾಡೇರಿಯನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು.

ಮನ್ ಮುಲ್ ಆವರಣದಲ್ಲಿ 5 ಎಕರೆ ಜಾಗದಲ್ಲಿ ಡೇರಿ ನಿರ್ಮಾಣವಾಗಿದೆ. 260 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣವಾಗಿದ್ದು,  ಕಟ್ಟಡದ ಹೊರ ಬಾಗದಲ್ಲಿ 4 ಬೃಹತ್ ಹಾಲು ಸಂಗ್ರಹಣಾ ಟ್ಯಾಂಕ್ ಇದೆ.  ತಲಾ ಒಂದುವರೆ ಲಕ್ಷ ಲೀಟರ್  ಹಾಲನ್ನ ಸಂಗ್ರಹಿಸುವ ಸಾಮರ್ಥ್ಯವನ್ನ ಹೊಂದಿವೆ. ಇದು ರಾಜ್ಯದ 2ನೇ ಅತಿದೊಡ್ಡ ಮೆಗಾ ಡೈರಿಯಾಗಿದೆ.ಹಾಲಿನ ಡೇರಿ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ amith sha

ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಡೇರಿ  ಉದ್ಘಾಟನೆ ಮಾಡಿದ್ದು, ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಕೇಂದ್ರಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಗೋಪಾಲಯ್ಯ, ಎಸ್.ಟಿ ಸೋಮಶೇಖರ್ ಹಾಗೂ ನಿರ್ಮಲಾನಂದ ಸ್ವಾಮೀಜಿಗಳು ಉಪಸ್ಥಿತರಿದ್ದರು.

Key words: Union -Home Minister- Amit Shah- inaugurated – milk dairy-mandya