ಭೂಗತ ಪಾತಕಿ ‘ಗೋಲ್ಡಿ ಬ್ರಾರ್’ನನ್ನು ಭಯೋತ್ಪಾದಕ ಎಂದು ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ,ಜನವರಿ,1,2024(www.justkannada.in): ಭೂಗತ ಪಾತಕಿ’ ಗೋಲ್ಡಿ ಬ್ರಾರ್’ ನನ್ನು ಕೇಂದ್ರ ಸರ್ಕಾರ ಭಯೋತ್ಪಾದಕ ಎಂದು ಘೋಷಣೆ ಮಾಡಿದೆ.

ಕಾನೂನುಬಾಹಿರ ಚಟುವಟಿಕೆ ಕಾಯ್ದೆಯಡಿ ಗೋಲ್ಡಿ ಬ್ರಾರ್ ನನ್ನು ಭಯೋತ್ಪಾದಕ ಎಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967 ರ ಅಡಿಯಲ್ಲಿ ಸತ್ವಿಂದರ್ ಸಿಂಗ್ ಅಲಿಯಾಸ್ ಸತೀಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ನನ್ನು ಭಯೋತ್ಪಾದಕ ಎಂದು ಗೃಹ ಸಚಿವಾಲಯ (ಎಂಎಚ್‌ಎ) ಸೋಮವಾರ ಘೋಷಿಸಿದೆ.

ಗೋಲ್ಡಿ ಬ್ರಾರ್ ಪಂಜಾಬ್ ನ ಫರೀದ್ ಕೋಟ್ ನಲ್ಲಿ ಜನಿಸಿದ್ದು ಸದ್ಯ ಕೆನಡಾದಲ್ಲಿ ತಲೆಮರಿಸಿಕೊಂಡಿದ್ದಾನೆ ಎನ್ನಲಾಗಿದೆ.

Key words: Underworld -gangster -Goldie Brar – declared – terrorist – central government