ದಸರಾ ಉದ್ಘಾಟನಾ ದಿನ ಯುವಕರ ಪುಂಡಾಟ: ಸೋಷಿಯಲ್ ಮೀಡಿಯಾದಲ್ಲಿ ವಿಡೀಯೋ ವೈರಲ್

Promotion

ಮೈಸೂರು, ಸೆಪ್ಟೆಂಬರ್ 30, 2019 (www.justkannada.in): ದಸರಾ ಉದ್ಘಾಟನಾ ದಿನವೇ ಯುವಕರ ಪುಂಡಾಟ ಮೆರೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಸುಮಾರು 10 ಮಂದಿ ಯುವಕರು ಗಲಾಟೆ ಮಾಡಿ ನಡು ರಸ್ತೆಯಲ್ಲೇ ಸಾರ್ವಜನಿಕರ ಮುಂದೆಯೇ ಇಬ್ಬರು ಯುವಕರಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.

ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.ಕೊನೆಗೆ ಸ್ಥಳಕ್ಕೆ ಬಂದ ಕೆ.ಆರ್. ಠಾಣೆಯ ಪೋಲಿಸರು ಗಲಾಟೆ ನಡೆಸಿದ ಕೆಲ ಯುವಕರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ರಾತ್ರಿ 9 ಗಂಟೆ ವೇಳೆಯಲ್ಲಿ ನಡೆದ ಘಟನೆ ನಡೆದಿದ್ದು, ನಡು ರಸ್ತೆಯಲ್ಲೇ ಇಬ್ಬರು ಯುವಕರಿ ತಳಿಸಿದ ತಂಡ. ಸಾರ್ವಜನಿಕರ ಎದುರಲ್ಲೇ ನಡೆದ ಮಾರಾಮಾರಿ ನಡೆಸಿದೆ. ಈ ಒಡೆದಾಟ ಬಿಡಿಸಲು ಹೆದರಿ ಸಹಾಯಕರಾಗಿ ನಿಂತ ಸಾರ್ವಜನಿಕರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೈಡ್ರಾಮ ನಡೆದಿದೆ.