ಕೊಹ್ಲಿ ಬಳಿಕ ಯಾರಿಗೆ ಆರ್’ಸಿಬಿ ನಾಯಕತ್ವ?!

Promotion

ಬೆಂಗಳೂರು, ಸೆಪ್ಟೆಂಬರ್ 21, 2021 (www.justkannada.in): ಈ ಸೀಸನ್ ಬಳಿಕ ಆರ್ ಸಿಬಿ ತಂಡದ ನಾಯಕತ್ವದಿಂದ ಕೆಳಗಿಳಿಯಲು ಕೊಯ್ಲಿ ನಿರ್ಧರಿಸಿದ ಬೆನ್ನಲ್ಲೆ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಮೂಡಿದೆ.

ತಂಡದ ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ ನಾಯಕನ ಪಟ್ಟ ನೀಡಲು ಆರ್ ಸಿಬಿ ಮ್ಯಾನೇಜ್ ಮೆಂಟ್ ನಿರ್ಧರಿಸಿದೆ ಎನ್ನಲಾಗಿದೆ. ಯುವಕರಿಗೆ ಕ್ಯಾಪ್ಟನ್ ಶಿಪ್ ಕೊಟ್ಟರೆ ಅನುಭವಿಗಳಾದ ಕೊಹ್ಲಿ, ಎಬಿಡಿ ಸಾಥ್ ಇರುತ್ತದೆ ಎಂಬ ಲೆಕ್ಕಾಚಾರ ನಡೆದಿದೆ.

ಆರ್ ಸಿಬಿ ತಂಡದ ಆಲ್ ರೌಂಡರ್ ದೇವದತ್ತ್ ಪಡಿಕ್ಕಲ್ ಗೆ ಭವಿಷ್ಯದ ದೃಷ್ಟಿಯಿಂದ ನಾಯಕನ ಸ್ಥಾನ ನೀಡಿದರೂ ಎಚ್ಚರಿ ಇಲ್ಲ ಎನ್ನಲಾಗಿದೆ.

ಈ ಮೂಲಕ ವಿರಾಟ್ ಕೊಹ್ಲಿಗೆ ಬಳಿಕ ಆರ್ ಸಿಬಿಯಲ್ಲಿ ಯಾರು ನಾಯಕತ್ವ ವಹಿಸಲಿದ್ದಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

key words: who will become rcb captain after kohli