‘ಕೊರೊನಾ ವೈರಸ್’ ಹೆಸರಲ್ಲಿ ಮತ್ತೆ ಸುದ್ದಿಯಾದ ರಾಖಿ ಸಾವಂತ್ !

Promotion

ಬೆಂಗಳೂರು, ಫೆಬ್ರವರಿ 6, 2019 (www.justkannada.in): ನಟಿ ರಾಖಿ ಸಾವಂತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ವಿಶ್ವದಾದ್ಯಂತ ಭಯ ಹುಟ್ಟಿಸಿರುವ ಕೊರೊನಾ ವೈರಸ್ ನಾಶ ಮಾಡುತ್ತೇನೆ ಎಂದು ರಾಖಿ ಚೀನಾದಲ್ಲಿ ಬೀಡುಬಿಟ್ಟಿದ್ದಾರೆ.

ರಾಖಿ ಚೀನಾಗೆ ಹೋಗುತ್ತಿರುವ ವಿಡಿಯೋ ಮತ್ತು ಚೀನದಲ್ಲಿ ಇರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೊರೊನಾ ವೈರಸ್ ಚೀನಾದಲ್ಲಿ ಸಾಕಷ್ಟು ಮಂದಿಯನ್ನು ಬಲಿತೆಗೆದುಕೊಂಡಿದೆ.

ವಿಡಿಯೋವೊಂದನ್ನು ಮಾಡಿರುವ ರಾಖಿ ಅದರಲ್ಲಿ ಮೋದಿ ಹೆಸರನ್ನು ಹೇಳಿದ್ದಾರೆ. ಮೋದಿಜೀ ನಾನು ಚೀನಾಗೆ ಹೋಗುತ್ತಿದ್ದೀನಿ. ಕೊರೊನಾ ವೈರಸ್ ಅನ್ನು ನಾಶ ಮಾಡುತ್ತೇನೆ.

ನಾನು ಕ್ಷೇಮವಾಗಿ ವಾಪಸ್ ಬರಲಿ ಅಂತ ಎಲ್ಲರು ಪ್ರಾರ್ಥಿಸಿ. ನಾನು ನಾಸಾದಿಂದ ಕೊರೊನಾ ವೈರಸ್ ಅನ್ನು ನಾಶ ಮಾಡಲು ಔಷದಿ ತಂದಿದ್ದೇನೆ” ಎಂದು ಹೇಳಿದ್ದಾರೆ.