ಹುಣಸೂರು ಪೊಲೀಸರ ಕಾರ್ಯಾಚರಣೆ: ಯುವಕರ ಬಳಿ ಹಣ, ಚಿನ್ನಾಭರಣ ದೋಚಿದ್ದ ನಾಲ್ವರು ದರೋಡೆಕೋರರ ಬಂಧನ…

Promotion

ಮೈಸೂರು,ಜ,1,2020(www.justkannada.in): ಮೈಸೂರಿನ ಹುಣಸೂರು ಪೊಲೀಸರ ಕಾರ್ಯಾಚರಣೆ ನಡೆಸಿ ನಾಲ್ವರು ದರೋಡೆಕೋರರ ಬಂಧಿಸಿದ್ದಾರೆ.

ರಾಘವೇಂದ್ರ(23),ನಿಖಿಲ್(19),ಕೀರ್ತಿ(20) ಹಾಗೂ ಅಭಿಷೇಕ್(19) ಬಂಧಿತ ಆರೋಪಿಗಳು. ಬಂಧಿತರಿಂದ 20 ಗ್ರಾಂ ಚಿನ್ನ,5800 ರೂ ನಗದು ಒಂದು ಸ್ಕೂಟರ್  ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಹೊಸ ವರ್ಷ ಆಚರಣೆಗೆಂದು ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಯುವಕರನ್ನ ದರೋಡೆಕೋರರು ದೋಚಿದ್ದರು. ಬೆಂಗಳೂರಿನ ಯುವಕರಾದ ಪ್ರದೀಪ್,ವಸಂತ್,ರಮೇಶ್ ಹಾಗೂ ರಂಜಿತ್ ರನ್ನ ಬೆದರಿಸಿ ದರೋಡೆ ನಡೆಸಿದ್ದರು.

ಹೋಟೆಲ್ ಪರಿಚಯಿಸುವ ನೆಪದಲ್ಲಿ ಯುವಕರಿಂದ 20 ಗ್ರಾಂ ಚಿನ್ನದ ಸರ ಹಾಗೂ 7 ಸಾವಿರ ನಗದು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಇದೀಗ ಕೃತ್ಯ ನಡೆದ 24 ಗಂಟೆಗಳ ಒಳಗೆ ಆರೋಪಿಗಳನ್ನ ಹುಣಸೂರು ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ. ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

key words: Operation –hunsur-police- Four- robbers- arrested