ಡೆಫ್ ಆರ್ ನಾಟ್ ಡಮ್ : ಇದು ಉಳಿದವರು ಕಂಡಂತೆ.

ಮೈಸೂರು, ಫೆ.27, 2020 : (www.justkannada.in news ) : ಎರಡುವರೆ ದಶಕಗಳ ಹಿಂದೆ ತಾವು ಓದಿದ, ಥೆರಪಿ ಪಡೆದ ಸಂಸ್ಥೆಗೆ ಪೋಷಕರ ಜತೆ ಇಂದು ಆಗಮಿಸಿದ್ದ ವಿದ್ಯಾರ್ಥಿಗಳು ಪುಳಕಿತಗೊಂಡಿದ್ದರೆ, ಶಿಕ್ಷಕ ವೃಂದದವರ ಕಣ್ಣಾಲಿಗಳು ಧನ್ಯತಾಭಾವದಿಂದ ತುಂಬಿದ್ದವು.

ಈ ದೃಶ್ಯ ಕಂಡು ಬಂದದ್ದು ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿರುವ ‘ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH) ಯಲ್ಲಿ. ವಾಕ್ ಮತ್ತು ಶ್ರವಣ ದೋಷದಿಂದ ಬಳಲುತ್ತಿರುವ ಅದೆಷ್ಟು ಮಕ್ಕಳ ಬಾಳಲ್ಲಿ ಆಶಾಕಿರಣ ಮೂಡಿಸಿದೆ ಈ ಸಂಸ್ಥೆ. ಸಂಸ್ಥೆಯಲ್ಲಿ ವ್ಯಾಸಂಗದ ಮಾಡುವುದರ ಜತೆಗೆ ಚಿಕಿತ್ಸೆ ಪಡೆದು ಇದೀಗ ಸಮಾಜದಲ್ಲಿ ಇತರರಂತೆ ಜೀವನ ನಡೆಸುತ್ತಿರುವ ಹಲವರನ್ನು ಕಾಣಬಹುದು. ಈ ಪೈಕಿ ಕಳೆದ 25 ವರ್ಷಗಳ ಹಿಂದೆ ಆಯಿಷ್ ನಲ್ಲಿ ವ್ಯಾಸಂಗ ಮಾಡಿದ, ಥೆರಪಿ ಪಡೆದ ಕೇರಳ ಮೂಲದ ಹತ್ತಾರು ಮಕ್ಕಳು ಕುಟುಂಬ ಸಮೇತ ಮೈಸೂರಿನ ಆಯಿಷ್ ಗೆ ಆಗಮಿಸಿದ್ದರು. ಅಂದು ಶಿಕ್ಷಣ ಪಡೆದ ಈ ಮಕ್ಕಳು ಇದೀಗ ಬೆಳೆದು ದೊಡ್ಡವರಾಗಿ, ಸಮಾಜದಲ್ಲಿ ಉನ್ನತ ಸ್ಥಾನಮಾನಗಳಿಸಿರುವುದು ವಿಶೇಷ.

mysore-AIISH-students-re.uion-director-all-india-institue-of-speech-and-hearing

‘ಆಯಿಷ್ ‘ ನಲ್ಲಿ ಬಾಲ್ಯದ ಶಿಕ್ಷಣ ಹಾಗೂ ಥೆರಪಿ ಚಿಕಿತ್ಸೆ ಪಡೆದವರು ಹಾಗೂ ಕುಟುಂಬ ವರ್ಗದವರು ಇಂದು ಬೆಳಗ್ಗೆ ಸಂಸ್ಥೆ ನಿರ್ದೇಶಕಿ ಡಾ. ಪುಷ್ಪಾವತಿ ಹಾಗೂ ಇತರೆ ಬೋಧಕ ಸಿಬ್ಬಂದಿ ವರ್ಗದವರನ್ನು ಭೇಟಿಯಾಗಲು ಕೇರಳದಿಂದ ಬಸ್ ಮಾಡಿಕೊಂಡು ಬಂದಿದ್ದವರು.

ಸರಿಸುಮಾರು 25 ವರ್ಷಗಳ ಹಿಂದೆ ತಾವು ಶಿಕ್ಷಣ/ ಥೆರಪಿ ನೀಡಿದ್ದ ಮಕ್ಕಳು ಈಗ ಬೆಳೆದು ದೊಡ್ಡವರಾಗಿರವುದನ್ನು ಕಂಡ ಆಯಿಷ್ ಭೋಧಕ ಸಿಬ್ಬಂದಿ ಕೆಲ ಕ್ಷಣ ಉದ್ವೇಗಕ್ಕೊಳಗಾದರು. ಹಲವು ವರ್ಷಗಳ ಬಳಿಕ ತಮ್ಮ ಮಕ್ಕಳೇ ಮನೆಗೆ ಬಂದಿದ್ದಾರೆನೋ ಎಂಬಂತೆ ಅವರ ಯೋಗಕ್ಷೇಮ ವಿಚಾರಿಸಿದರು. ಆ ಮಕ್ಕಳು (ಈಗ ಯುವಕರು ) ಸಹ ತಮ್ಮ ಪೋಷಕರನ್ನು ಕಂಡಷ್ಟೆ ವಾತ್ಸಲ್ಯದಿಂದ ಶಿಕ್ಷಕರ ಜತೆ ಮಾತುಕತೆ ನಡೆಸಿದರು. ಮಕ್ಕಳ ಪೋಷಕರು ಸಹ ಆಯಿಷ್ ಸಿಬ್ಬಂದಿ ವರ್ಗದವರ ಸಹಕಾರ ಪ್ರೋತ್ಸಾಹಕ್ಕೆ ಧನ್ಯವಾದ ಅರ್ಪಿಸಿದರು. ಬಹುತೇಕ ವಿದ್ಯಾರ್ಥಿಗಳು ಹಾಗೂ ಪೋಷಕರು ಮಲೆಯಾಳಂನಲ್ಲೇ ಕೃತಜ್ಞತೆ ಸಲ್ಲಿಸಿದರು. ಆದರೂ ಅಲ್ಲಿ ಭಾಷೆ ಸಂವಹನಕ್ಕೆ ತೊಡಕಾಗಲೇ ಇಲ್ಲ. ಕಾರಣ ಅಂತಃಕರಣಕ್ಕೆ ಭಾಷೆಯ ಹಂಗೇ ಇರದಿದ್ದದ್ದು.

mysore-AIISH-students-re.uion-director-all-india-institue-of-speech-and-hearing

ಇಂದು ಆಗಮಿಸಿದ್ದ ಯುವಕರ ಪೈಕಿ ಡಾಕ್ಟರ್, ಸಿವಿಲ್ ಇಂಜಿನಿಯರ್, ಆರ್ಕಿಟೆಕ್ಟ್, ಉದ್ಯಮಿಗಳಾಗಿರುವ ವಿಷಯ ತಿಳಿದು ಸಂಸ್ಥೆ ನಿರ್ದೇಶಕಿ ಡಾ. ಪುಷ್ಪಾವತಿ ಸಂಸತಗೊಂಡರು. ಆನಂದಭಾಷ್ಪದಿಂದ ಅವರ ಕಣ್ಣಾಲಿಗಳು ತುಂಬಿದವು.

ಡೆಫ್ ಆರ್ ನಾಟ್ ಡಮ್ :
ಬಳಿಕ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಸಂಸ್ಥೆ ನಿರ್ದೇಶಕಿ ಡಾ.ಪುಷ್ಪಾವತಿ ಹೇಳಿದಿಷ್ಟು…
ಅದು 1987-88 ರ ಸಮಯ. ನಾನಾಗ ಬಿಎಸ್ಸಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೆ. ನಮಗಾಗ ಇಂದಿರಾ ಕುಮಾರಿ ಅವರೇ ಪ್ರಾಧ್ಯಾಕರು. ಅವರು ಮಾರ್ಗದರ್ಶನದಲ್ಲಿ ಮಕ್ಕಳಿಗೆ ಶಿಕ್ಷಣ ಜತೆಗೆ ಥೆರಪಿ ಕಲಿಸುತ್ತಿದ್ದೆವು. ಇಂದು ಆ ಮಕ್ಕಳು ಬೆಳೆದು ದೊಡ್ಡವರಾಗಿ ನಮ್ಮೆದುರು ನಿಂತಿರುವುದನ್ನು ನೋಡಿದಾಗ ಈ ವೃತ್ತಿಯ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ.

ವಾಕ್ -ಶ್ರವಣ ದೋಷವಿರುವ ಮಕ್ಕಳನ್ನು ಕೇವಲ ಸಮಸ್ಯೆಯಿಂದ ಗುಣಮುಖರನ್ನಾಗಿ ಮಾಡುವುದು ಮಾತ್ರವಲ್ಲ, ಅವರು ಭವಿಷ್ಯದಲ್ಲಿ ಸಮಾಜದ ಇತರರಂತೆ ಎತ್ತರದ ಸ್ಥಾನಮಾನಗಳಿಸುವ ವಾತಾವರಣ ನಿರ್ಮಾಣ ಮಾಡುವುದು ಮುಖ್ಯ. ಈ ನಿಟ್ಟಿನಲ್ಲಿ ಇಂದು ಆಗಮಿಸಿದ್ದ ವಿದ್ಯಾರ್ಥಿಗಳನ್ನು ಕಂಡಾಗ ಸಾರ್ಥಕ ಭಾವ ಮೂಡುತ್ತದೆ. ಸಾಮಾನ್ಯವಾಗಿ ಬಳಸುವ ‘ ಡಫ್ ಅಂಡ್ ಡಮ್ ‘ ಪದವನ್ನು ಈ ಮಕ್ಕಳು ‘ ಡಫ್ ಆರ್ ನಾಟ್ ಡಮ್ ‘ ಎಂದು ಸಾಧನೆ ಮೂಲಕ ಸಾಬೀತು ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.mysore-AIISH-students-re.uion-director-all-india-institue-of-speech-and-hearing

ಈ ವೇಳೇ ಡಾ. ಅಜೀಶ್ ಕೆ ಅಬ್ರಾಹಂ, ಡಾ.ಎನ್. ಶ್ರೀದೇವಿ, ಡಾ. ಸ್ವಪ್ನ,ಡಾ. ಸಂಗೀತಾ ಮಹೇಶ್, ಸಂಸ್ಥೆಯ ನಿವೃತ್ತ ವಾಕ್ ಭಾಷಾ ತಜ್ಞರಾದ ಇಂದಿರಾನಾಯರ್ , ಪಿಆರ್ ಓ ಕೀರ್ತಿ ಉಪಸ್ಥಿತರಿದ್ದರು.

key words : mysore-AIISH-students-re.uion-director-all-india-institue-of-speech-and-hearing