ದೇವರಾಜ ಮಾರುಕಟ್ಟೆ ನೆಲಸಮಗೊಳಿಸುವ ವಿಚಾರ:  ಕೋರ್ಟ್ ನಿರ್ದೇಶನದ ಮೇರೆಗೆ ಮುಂದಿನ ಕ್ರಮ –ಮೈಸೂರು ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ಸ್ಪಷ್ಟನೆ…

ಮೈಸೂರು,ಜ,13,2020(www.justkannada.in): ಮೈಸೂರಿನ ಪಾರಂಪರಿಕ ದೇವರಾಜ ಮಾರುಕಟ್ಟೆ ನೆಲಸಮಗೊಳಿಸುವ ವಿಚಾರ ಸಂಬಂಧ  ನ್ಯಾಯಾಲಯದ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ಹೇಳಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ, ದೇವರಾಜ ಮಾರುಕಟ್ಟೆಯನ್ನು ನೆಲಸಮಗೊಳಿಸಿ ಪುನರ್ ನಿರ್ಮಿಸಲು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯಿಸಲಾಗಿದೆ. ಪಾಲಿಕೆ ನಿರ್ಣಯವನ್ನು ವಿರೋಧಿಸಿ ದೇವರಾಜ ಮಾರುಕಟ್ಟೆ ವರ್ತಕರ ಸಂಘ ಹೈಕೋರ್ಟ್ ಮೆಟ್ಟಿಲೇರಿದೆ. ಇಬ್ಬರ ವಾದ ಆಲಿಸಿದ್ದ ನ್ಯಾಯಾಲಯ ತಜ್ಞರ ಸಮಿತಿ ರಚಿಸಿ ಮಾರುಕಟ್ಟೆ ಸ್ಥಿತಿಗತಿ ಬಗ್ಗೆ 6 ತಿಂಗಳಲ್ಲಿ ವರದಿ ನೀಡುವಂತೆ ಪಾಲಿಕೆಗೆ ಸೂಚಿಸಿತ್ತು. ಅದರಂತೆ ಪಾಲಿಕೆ ನುರಿತ ತಜ್ಞರ ಸಮಿತಿ ರಚನೆ ಮಾಡಿತ್ತು. ತಜ್ಞರ ಸಮಿತಿ ಕೂಡ ದೇವರಾಜ ಮಾರುಕಟ್ಟೆ ಕೆಡವಿ ಪುನರ್ ನಿರ್ಮಾಣ ಮಾಡುವಂತೆ ವರದಿ ನೀಡಿದೆ. ಆ ವರದಿಯನ್ನು ನ್ಯಾಯಾಲಯದ ಮುಂದಿಡುತ್ತೇವೆ. ನಮ್ಮ ಅಭಿಪ್ರಾಯವನ್ನ ನ್ಯಾಯಾಲದ ಮುಂದಿಡುತ್ತೇವೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಶಿಥಿಲಾವಸ್ಥೆಯಲ್ಲಿರುವ ಪಾರಂಪರಿಕ ದೇವರಾಜ ಮಾರುಕಟ್ಟೆಯನ್ನು ಕೆಡವಿ ಪುನರ್ ನಿರ್ಮಾಣ ಮಾಡಬೇಕೆಂಬುದು ಮಹಾನಗರ ಪಾಲಿಕೆಯ ಉದ್ದೇಶವಾಗಿದೆ. ಪಾರಂಪರಿಕ ಮಾದರಿಯಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಬೇಕಿದೆ ಎಂದು ಗುರುದತ್ತ ಹೆಗ್ಡೆ ತಿಳಿಸಿದರು.

Key words: mysore-Devaraja market-Further- action – direction –Court-Mysore city corporation- Commissioner –guruduth hegde