ಎಂ.ಬಿ ಪಾಟೀಲ್ ಮೊದಲು ತಮ್ಮನ್ನು ಸಿಎಂ ಮಾಡಿ ಎಂದು ಕಾಂಗ್ರೆಸ್ ವರಿಷ್ಠರನ್ನ ಕೇಳಿಕೊಳ್ಳಲಿ- ಸಚಿವ ಸುಧಾಕರ್ ಟಾಂಗ್ .

Promotion

ಚಿಕ್ಕಬಳ್ಳಾಪುರ,ಆಗಸ್ಟ್,18,2022(www.justkannada.in):  ಬಿಎಸ್ ಯಡಿಯೂರಪ್ಪರನ್ನ ಮುಂದಿನ ಸಿಎಂ ಎಂದು ಘೋಷಿಸಲಿ ನೋಡೋಣ ಎಂದು ಸವಾಲು ಹಾಕಿದ್ಧ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ‍ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟಾಂಗ್ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವ ಸುಧಾಕರ್, ಮೊದಲು ಎಂ ಬಿ ಪಾಟೀಲ್ ತಮ್ಮನ್ನು ಸಿಎಂ ಮಾಡಲಿ ಎಂದು ಕಾಂಗ್ರೆಸ್ ವರಿಷ್ಠರನ್ನ ಕೇಳಿಕೊಳ್ಳಲಿ. ಎಂಬಿ ಪಾಟೀಲ್ ಮುಂದಿನ ಸಿಎಂ ಎಂದು ರಾಹಲ್ ಗಾಂಧಿ ಘೋಷಿಸಲಿ. ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ಲಿಂಗಾಯತರು ಸಿಎಂ ಆಗಿಲ್ಲ.  ವಿರೇಂದ್ರ ಪಾಟೀಲ್ ಬಳಿಕ ಕಾಂಗ್ರೆಸ್ ನಲ್ಲಿ ಲಿಂಗಾಯತರು ಸಿಎಂ ಆಗಿಲ್ಲ. ಹೀಗಾಗಿ ಎಂ.ಬಿ ಪಾಟೀಲ್ ತಮ್ಮನ್ನು ಸಿಎಂ ಮಾಡಿ ಎಂದು ಕೇಳಿಕೊಳ್ಳಲಿ ಎಂದು ತಿರುಗೇಟು ನೀಡಿದರು.

Key words: MB Patil – Congress -leaders – CM-Minister -Sudhakar