ಮೈಸೂರಿನಲ್ಲಿ ಫೆ.26ರಂದು ಸಾಮೂಹಿಕ ಉಚಿತ ಅಕ್ಷರಾಭ್ಯಾಸ.

ಮೈಸೂರು,ಫೆಬ್ರವರಿ,20,2023(www.justkannada.in) ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮತ್ತು ಬ್ರಹ್ಮಿಭೂತ ಶ್ರೀ ವಾಸುದೇವ ಮಹರಾಜ್ ಫೌಂಡೇಶನ್ ಸಹಯೋಗದಲ್ಲಿ ಫೆಬ್ರವರಿ 26ರಂದು ಭಾನುವಾರ ಬೆಳಗ್ಗೆ 8 ಘಂಟೆಯಿಂದ ಸಾಮೂಹಿಕ‌ ಅಕ್ಷರಾಭ್ಯಾಸವನ್ನ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಕೆಎಂಪಿಕೆ ಟ್ರಸ್ಟ್ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್‌  ಶಾಲೆಯಲ್ಲಿ  ಇದೇ ತಿಂಗಳು ಫೆಬ್ರವರಿ 26ರಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ  ಬ್ರಹ್ಮೀಬೂತ ಶ್ರೀ ವಾಸುದೇವ್ ಮಹಾರಾಜ್ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಎಲ್ಲಾ ಜನಾಂಗದವರಿಗೂ ಉಚಿತ ಸಾಮೂಹಿಕ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಮಹರ್ಷಿ ಶಾಲೆಯಲ್ಲಿ ಫೆಬ್ರವರಿ 26ರಂದು ನಡೆಯಲಿರುವ ಸಾಮೂಹಿಕ ಉಚಿತ ಅಕ್ಷರಾಭ್ಯಾಸ  ಕಾರ್ಯಕ್ರಮದಲ್ಲಿ ಎಲ್ಲಾ ಜನಾಂಗದವರು ಭಾಗವಹಿಸಬಹುದು, 2ವರ್ಷದಿಂದ 5ವರ್ಷದ ವಯೋಮಿತಿ ಒಳಗಿನ ಮಕ್ಕಳು ಅವರ ಪೋಷಕರೊಡನೆ ಅಕ್ಷರಾಭ್ಯಾಸದಲ್ಲಿ ಭಾಗವಹಿಸಲು 9880752727 7829067769  ಸಂಪರ್ಕಿಸಬಹುದು, ನಮ್ಮ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಸ್ಲೇಟು, ಬಳಪ ಇನ್ನಿತರ ಸಾಮಾಗ್ರಿಗಳನ್ನ ಉಚಿತವಾಗಿ ಒದಗಿಸಲಾಗುವುದು ಎಂದು ತಿಳಿಸಿದರು.

ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳು, ಶಾಸಕ ಎಸ್.ಎ ರಾಮದಾಸ್‌ , ಮೈಸೂರು ಬ್ರಾಹ್ಮಣ ಸಂಘ  ಅಧ್ಯಕ್ಷ ಡಿಟಿ. ಪ್ರಕಾಶ್, ಮುಖ್ಯ ಅತಿಥಿಗಳಾಗಿ ಮೇಯರ್ ಶಿವಕುಮಾರ್, ಬಿಜೆಪಿ ನಗರ ಅಧ್ಯಕ್ಷರಾದ ಟಿ ಎಸ್ ಶ್ರೀವತ್ಸ, ಮುಡಾ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್, ಹಿರಿಯ ಸಮಾಜ ಸೇವಕ ಕೆ ರಘುರಾಮ್ ವಾಜಪಾಯಿ, ಕಾಂಗ್ರೆಸ್ ಮುಖಂಡ  ಎನ್ಎಂ ನವೀನ್ ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾನಂದೀಶ್, ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥರಾದ ಮಹೇಶ್ ಶೆಣೈ, ನಗರಪಾಲಿಕಾ ಸದಸ್ಯರಾದ ಮಾವಿ‌. ರಾಮಪ್ರಸಾದ್, ನಂಜುಂಡಸ್ವಾಮಿ‌, ಇನ್ನಿತರರು ಭಾಗವಹಿಸಲಿದ್ದಾರೆ

Key words: Mass- Free- Literacy – 26th Feb – Mysore.