ಮೈಸೂರು ರಾಜವಂಶಸ್ಥರ ಸಮಾಧಿ ಸ್ಥಳ ಮಧುವನಕ್ಕೆ ಕಾಯಕಲ್ಪ…

Promotion

ಮೈಸೂರು,ಜೂ,25,2019(www.justkannada.in): ಮೈಸೂರು ರಾಜವಂಶಸ್ಥರ ಸಮಾಧಿ ಸ್ಥಳ ಮಧುವನಕ್ಕೆ ಕಾರ್ಯಕಲ್ಪ ಸಿಕ್ಕಿದ್ದು  ಅರಮನೆ ಕೆಲಸಗಾರರಿಂದ ಸ್ವಚ್ಛ ಕಾರ್ಯ ನಡೆಯುತ್ತಿದೆ.

ಮೈಸೂರು ನಂಜನಗೂಡು ಮುಖ್ಯ ರಸ್ತೆಯಲ್ಲಿ 12 ಎಕರೆ ವಿಶಾಲವಾದ ಜಾಗದಲ್ಲಿ ಇರುವ ಮಧುವನ ಮೈಸೂರು ರಾಜವಂಶಸ್ಥರಾದ ಯುದುವಂಶದವರ ಸಮಾಧಿಯ ಸ್ಥಳವಾಗಿದೆ. ಈ ಜಾಗ ರಾಜವಂಶಸ್ಥರಿಗಾಗಿಯೇ ಮೀಸಲಿರಿಸಲಾಗಿದ್ದು ಹೊಯ್ಸಳ ಶೈಲಿಯಲ್ಲಿ ರಾಜವಂಶಸ್ಥರ ಸಮಾಧಿ ನಿರ್ಮಾಣವಾಗಿದೆ.

ಈ ಸಮಾಧಿಗೆ ಇದೀಗ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಅರಮನೆ ಕೆಲಸಗಾರು ಮಧುವನದ ಸುತ್ತ ಮುತ್ತ ಸ್ವಚ್ಚಗೊಳಿಸುತ್ತಿದ್ದಾರೆ.  ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ರಾಜ ಒಡೆಯರ್ ಟ್ರಸ್ಟ್‌ ನ ಅಧ್ಯಕ್ಷ ರಾಗಿದ್ದು,  ಮಧುವನದ ಜೀರ್ಣೋದ್ಧಾರ ಕಾರ್ಯದ ನಂತರ ಅಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಚಿಂತನೆ ನಡೆಸಲಾಗಿದೆ.

Key words: Madhuvan -burial place – Mysore dynasty-cleaning