ರಾಜ್ಯದಲ್ಲೂ ಕಾಂಗ್ರೆಸ್ ಮೂಲೆಗುಂಪು ಆಗಲಿದೆ: ಸಚಿವ ಆರ್. ಅಶೋಕ್ ಟಾಂಗ್

Promotion

ಬೆಂಗಳೂರು,ಮಾರ್ಚ್,10,2022(www.justkannada.in):  ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಈ ಮಧ್ಯೆ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿ ಅಧಿಕಾರ ಹಿಡಿಯುವತ್ತ ಸಾಗಿದರೆ ಕಾಂಗ್ರೆಸ್ ನೆಲ ಕಚ್ಚಿದೆ.

ಈ ಹಿನ್ನೆಲೆಯಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ಪಂಚರಾಜ್ಯಗಳ ಪೈಕಿ  4 ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಪಂಜಾಬ್ ನಲ್ಲಿ ಕಾಂಗ್ರೆಸ್ ನವರು ಹಿನಾಯವಾಗಿ ಸೋತಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ಮೂಲೆಗುಂಪು ಆಗಲಿದೆ. ಸದ್ಯ ಬಿಜೆಪಿಗೆ ನಾಲ್ಕುರಾಜ್ಯಗಳಲ್ಲಿ ಬಹುಮತ ಸಿಗುತ್ತಿದೆ ಎಂದಿದ್ದಾರೆ.

ಉತ್ತರ ಪ್ರದೇಶ, ಉತ್ತರಖಂಡ್ ನಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿ ಬಹುಮತ ಪಡೆಯುತ್ತ ಸಾಗಿದರೇ ಮಣಿಪುರ ಮತ್ತು ಗೋವಾದಲ್ಲಿ ಮ್ಯಾಜಿಕ್ ನಂಬರ್ ನ ಸನಿಹದಲ್ಲಿದೆ.

Key words: five-states-election-result- R.Ashok