ಲೋಕಸಭೆಯಲ್ಲಿ ಸೋಲಿನ ಭೀತಿಯಿಂದಾಗಿ ಬಿಜೆಪಿ ಮೈತ್ರಿಗೆ ಮುಂದಾಗಿದೆ – ಸಚಿವ ಸಂತೋಷ್ ಲಾಡ್ ಟಾಂಗ್.

Promotion

ಧಾರವಾಡ,ಜುಲೈ,15,2023(www.justkannada.in):  ಲೋಕಸಭೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ ಕುರಿತು ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು, ಸೋಲಿನ ಭೀತಿಯಿಂದಾಗಿ ಬಿಜೆಪಿ ಮೈತ್ರಿಗೆ ಮುಂದಾಗಿದೆ ಎಂದು ಟಾಂಗ್ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಮೈತ್ರಿ ಎಂಬುದು ರಾಜಕೀಯದಲ್ಲಿ ಸಹಜ. ಕಳೆದ ಬಾರಿ ನಾವೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದವು. ಅದು ಅವರವರ ವಿಚಾರ  ಬಿಜೆಪಿ ಸೋಲಿನ ಭಯದಿಂದ ಮೈತ್ರಿ ಮಾಡಿಕೊಳ್ಳುತ್ತಿರಬಹುದು ಎಂದರು.

ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆ ವಿಚಾರವಾಗಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಬರಗಾಲ ಪೀಡಿತ ಪ್ರದೇಶ ಘೋಷಣೆ ನಿರ್ಧಾರ ಸರ್ಕಾರ ಮಾಡುತ್ತದೆ. ಸರ್ವೆ ವರದಿ, ಮಳೆ ಅಂಕಿ ಸಂಖ್ಯೆ ನೋಡಿ ತೀರ್ಮಾನ ಆಗುತ್ತದೆ. ಈಗಾಗಲೇ ಸರ್ಕಾರ, ಸಂಬಂಧಿಸಿ ಸಚಿವರು ಎಲ್ಲ ಮಾಹಿತಿ ಪಡೆದಿದ್ದಾರೆ. ಸಂಬಂಧಿತ ಇಲಾಖೆಯ ಸಚಿವರೆ ತೀರ್ಮಾನ ಹೇಳುತ್ತಾರೆ ಎಂದು ತಿಳಿಸಿದರು.

Key words: fear -defeat – Lok Sabha-election- BJP – alliance- Minister- Santosh Lad