ಬೆಂಗಳೂರು ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಬದ್ಧ- ಪ್ರಧಾನಿ ನರೇಂದ್ರ ಮೋದಿ ನುಡಿ.

kannada t-shirts

ಬೆಂಗಳೂರು,ಜೂನ್,20,2022(www.justkannada.in): ಬೆಂಗಳೂರು ನಗರ ಅಭಿವೃದ್ಧಿಯೇ ಯುವಕರ ಕನಸಾಗಿದೆ.  ಒಂದು ಭಾರತ ಶ್ರೇಷ್ಠ ಭಾರತ ಸಾಲಿಗೆ ಬೆಂಗಳೂರು ಮಾದರಿಯಾಗಿದೆ. ಬೆಂಗಳೂರು ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಕೊಮ್ಮಘಟದಲ್ಲಿ ಆಯೋಜಿಸಿರುವ ಬೃಹತ್​ ಸಮಾವೇಶದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ  ಪ್ರಧಾನಿ  ನರೇಂದ್ರ ಮೋದಿ, ಕನ್ನಡದಲ್ಲೇ ಭಾಷಣ ಆರಂಭಿಸಿ. ಕರುನಾಡಿನ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು. ರಾಜ್ಯದ ಪಾಲಿಗೆ ಇಂದು ಮಹತ್ವದ ದಿನವಾಗಿದೆ. ಯೋಜನೆಗಳನ್ನ ಜಾರಿಗೊಳಿಸಲು ನನಗೆ ಸಂತೋಷವಾಗುತ್ತಿದೆ.  ಡಬಲ್ ಇಂಜಿನ್ ಸರ್ಕಾರ ಕರ್ನಾಟಕಕ್ಕೆ ತ್ವರಿತ ಅಭಿವೃದ್ಧಿ ಭರವಸೆ ನೀಡಿತ್ತು. ಆ ಭರವಸೆಗಳಿಗೆ ಇಂದು ನಾವೆಲ್ಲಾ ಸಾಕ್ಷಿಯಾಗಿದ್ದೇವೆ.  27 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಉನ್ನತ ಶಿಕ್ಷಣ ಸಂಶೋಧನೆ,ಆರೋಗ್ಯ ಸಂಪರ್ಕ ಕ್ಷೇತ್ರದ ಯೋಜನೆಗಳು ಇವಾಗಿದೆ ಎಂದರು.

ನಿಮ್ಮ ಸೇವೆಗೆ ನಾವು ಸದಾ ಸಿದ‍್ಧರಿದ್ದೇವೆ ಇಲ್ಲಿಂದ ಏನೋ ಹೊಸದನ್ನ ತೆಗೆದುಕೊಂಡು ಹೋಗುತ್ತಿದ್ದೇನೆ. ನಾನು ನಿಮ್ಮ ಸಂಭ್ರಮದಲ್ಲಿ ಭಾಗಿಯಾಗಲು ಬಂದಿದ್ದೇನೆ. ಮೈಸೂರಿನಲ್ಲೂ ಇದೇ ವಿಕಾಸಯಾತ್ರೆಗೆ ವೇಗ ಕೊಡುವ ಕೆಲಸವಾಗುತ್ತದೆ  ಕರ್ನಾಟಕದಲ್ಲಿ 5 ರಾಷ್ಟ್ರೀಯ ಹೆದ್ದಾರಿಯ ಪ್ರಾಜೆಕ್ಟ್, 7 ರೈಲು ಯೋಜನೆಗಳನ್ನ ಚಾಲನೆ ನೀಡಿದ್ದೇವೆ.  ಬೆಂಗಳೂರು ಕನಸುಗಳು ನಗರವಾಗಿದೆ ಎಂದು ಹೇಳಿದರು.

ಬೆಂಗಳೂರು ಏಕ್ ಭಾರತ್ ಶ್ರೇಷ್ಟ ಭಾರತದ ಪ್ರತಿಬಿಂಬ. ಕೇಂದ್ರ ಸರ್ಕಾರದಿಂದ ಬೆಂಗಳೂರಿನ ಶಕ್ತಿ ವೃದ್ದಿಸುವ ಕೆಲಸವಾಗುತ್ತದೆ. ಬೆಂಗಳೂರು ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಡಬಲ್ ಇಂಜಿನ್ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ನಗರದಲ್ಲಿ ಟ್ರಾಫಿಕ್ ಮುಕ್ತಗೊಳಿಸಲು ಯತ್ನಿಸುತ್ತೇವೆ ಎಂದರು.

ಸಬ್ ಅರ್ಬನ್ ರೈಲು ಬಗ್ಗೆ 40 ವರ್ಷಗಳಿಂದ ಚರ್ಚೆಯಾಗುತ್ತಿತ್ತು. ನಾವು ಈ ಚರ್ಚೆಯನ್ನ ಪೂರ್ಣಗೊಳಿಸಿ ಕೇವಲ 40 ದಿನಗಳಲ್ಲಿ ಕೆಲಸವನ್ನ ಪೂರ್ಣಗೊಳಿಸಿದ್ದೇವೆ. 40 ವರ್ಷದ ಹಿಂದೆ ಕೆಲಸ ಪೂರ್ಣವಾಗಬೇಕಿತ್ತು ಆದರೆ 40 ವರ್ಷದ ನಂತರ ಮಾತನಾಡಬೇಕಾದ ಸ್ಥಿತಿ ಬಂದಿದೆ.  ಕೇಂದ್ರ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಯಾಗಿವೆ ಪ್ರತಿಕ್ಷಣವನ್ನು ನಿಮ್ಮ ಸೇವೆಗೆ ಮೀಸಲಿಟ್ಟಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: Double- engines –govt-Prime Minister -Narendra Modi.

website developers in mysore