ಕೆಆರ್ ಎಸ್ ಸುತ್ತ ಗಣಿಗಾರಿಕೆ ನಿಷೇಧಕ್ಕೆ ಆಗ್ರಹ: ರೈತರಿಂದ ಪ್ರತಿಭಟನೆ.

Promotion

ಮಂಡ್ಯ,ಜುಲೈ,25,2022(www.justkannada.in):  ಕೆಆರ್ ಎಸ್ ಸುತ್ತ ಗಣಿಗಾರಿಕೆ ನಿಷೇಧಕ್ಕೆ ಆಗ್ರಹಿಸಿ  ರೈತರು ಕೃಷ್ಣರಾಜಸಾಗರ ಜಲಾಶಯದ ಎದುರು  ಪ್ರತಿಭಟನೆಗೆ ಕುಳಿತಿದ್ದಾರೆ.

ಪಾಂಡವರಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಟ್ರೈಯಲ್ ಬ್ಲಾಸ್ಟ್ ವಿರೋಧಿಸಿ ಕರ್ನಾಟಕ ರಾಜ್ಯ ರೈತಸಂಘ ಸೇರಿ ಹಲವು ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ಅಲ್ಲದೆ ಕನ್ನಂಬಾಡಿ ಕಟ್ಟೆ ಸುತ್ತ ಮುತ್ತ ಗಣಿಗಾರಿಕೆ ನಿಷೇಧಿಸುವಂತೆ ಪ್ರತಿಭಟನಾನಿರತ ರೈತರು ಆಗ್ರಹಿಸಿದ್ದಾರೆ.

ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯಿಂದ ಕೆಆರ್ ಎಸ್ ಗೆ ಹಾನಿ ಆರೋಪ ಹಿನ್ನೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಟ್ರಯಲ್ ಬ್ಲಾಸ್ಟ್  ನಡೆಸಲಾಗುತ್ತಿದ್ದು ಇದಕ್ಕೆ ವಿರೋಧಿಸಿ ರೈತರು ಕೆಆರ್ ಎಸ್ ಎದುರು ಧರಣಿ ನಡೆಸುತ್ತಿದ್ದಾರೆ. ಕೆಆರ್ ಎಸ್ ಸುತ್ತಾಮುತ್ತ ಡಿವೈಎಸ್ಪಿ ಸಂದೇಶ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.

Key words: Demand – ban -mining -around –KRS-Farmers- protest.