ನನ್ನ ಹೆಸರಿನ ಮುಂದೆ ‘ಗೌಡ’ ಸೇರಿಸಿದ್ದಕ್ಕೆ ನಾನು ಸಿಎಂ, ಕೇಂದ್ರ ಸಚಿವನಾಗಲು ಸಾಧ್ಯವಾಯ್ತು…!

Promotion

 

ಬೆಂಗಳೂರು, ಜೂ.23, 2019: (www.justkannada.in news) ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಡಿ.ವಿ.ಸದಾನಂದ ಎಂದಿತ್ತು. ಆಗ ಸೋತಿದ್ದೆ. ಬಳಿಕ ಹೆಸರಿನ ಜತೆಗೆ ‘ಗೌಡ’ ಎಂದು ಸೇರಿಕೊಳ್ಳಲು ಕೆಲವರು ಸಲಹೆ ನೀಡಿದರು. ಪರಿಣಾಮ ನನ್ನ ಹೆಸರು ಡಿ.ವಿ.ಸದಾನಂದ ಗೌಡ ಎಂದು ಬದಲಾಯಿತು. ಆನಂತರ ನಡೆದದ್ದು ಇತಿಹಾಸ…

ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್‌ ಹಾಗೂ ಕೃಷಿಕ ಸಾಹಿತ್ಯಪರಿಷತ್ತು ಬೆಂಗಳೂರಿನ ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತಿ’ ಹಾಗೂ ‘ಕೆಂಪೇಗೌಡರ ಯಲಹಂಕ ಸಂಸ್ಥಾನದ ಇತಿಹಾಸ ಮತ್ತು ಐತಿಹ್ಯದ ಬಗ್ಗೆ ವಿಚಾರ ಸಂಕಿರಣ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದಿಷ್ಟು….

ನನ್ನ ಹೆಸರಿನೊಂದಿಗೆ ‘ ಗೌಡ ‘ ಎಂದು ಸೇರಿಸಿಕೊಂಡಿದ್ದಕ್ಕೆ ನಾನು ರಾಜ್ಯದ ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವನಾಗಿದ್ದೇನೆ. ಅದನ್ನು ಹೇಳಲು ನನಗೆ ಹಿಂಜರಿಕೆ, ನಾಚಿಕೆ ಇಲ್ಲ. ‘ಗೌಡ’ಎಂಬ ಹೆಸರು ಇದ್ದಿದ್ದಕ್ಕೆ ನನಗೆ ಮುಖ್ಯಮಂತ್ರಿ ಪದವಿ ಹಾಗೂ ಕೇಂದ್ರ ಮಂತ್ರಿ ಸ್ಥಾನ ಸಿಕ್ಕಿತ್ತು. ನಾನೊಬ್ಬ ಗೌಡ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಸಮುದಾಯದ ಹೆಸರು ಕಾರಣ ಎಂದಿದ್ದಾರೆ.

key words : d.v.sadananda.gowda-minister-gowda-caste-bangalore