ಮೈಸೂರು ಮಹಾನಗರ ಪಾಲಿಕೆ ಸಭೆಗೂ ತಟ್ಟಿದ ಕೊರೋನಾ ವೈರಸ್ ಭೀತಿ…..

Promotion

ಮೈಸೂರು,ಮಾ,4,2020(www.justkannada.in):  ಜಗತ್ತಿನಲ್ಲಿ ಸಾಕಷ್ಟು  ಆತಂಕ ಸೃಷ್ಠಿಸಿರುವ ಕೊರೋನಾ ವೈರಸ್ ಭೀತಿ ದೇಶ ಮತ್ತು ರಾಜ್ಯದೆಲ್ಲೆಡೆ ಕಾಡುತ್ತಿದೆ. ಅಂತೆಯೇ ಕೊರೋನಾ ವೈರಸ್ ಭೀತಿ ಮೈಸೂರು ಮಹಾನಗರ ಪಾಲಿಕೆ ಸಭೆಗೂ ತಟ್ಟಿದೆ.

ಹೌದು, ಕೊರೋನಾ ವೈರಸ್ ಭೀತಿಯಿಂದಾಗಿ ಮೈಸೂರು ಮಹಾನಗರ ಪಾಲಿಕೆ  ಮೇಯರ್ ತಸ್ನೀಂ ಹಾಗೂ ಉಪಮೇಯರ್ ಶ್ರೀಧರ್ ಅವರು ಇಂದು ಸಭೆಗೆ ಮಾಸ್ಕ್ ಧರಿಸಿ ಸಭೆಗೆ ಹಾಜರಾಗಿದ್ದಾರೆ. ಸ್ಥಾಯಿ ಸಮಿತಿ ಸದಸ್ಯರು ಸಹ ಮಾಸ್ಕ್ ನೊಂದಿಗೆ ಸಭೆಗೆ ಹಾಜರಾಗಿದ್ದಾರೆ.

ಸದ್ಯಕ್ಕೆ ಮೈಸೂರಿನಲ್ಲಿ ಕೊರೋನ ವೈರಸ್ ಭಯವಿಲ್ಲದಿದ್ದರೂ ಸಹ ಮೇಯರ್ ತಸ್ನೀಂ  ಮಾಸ್ಕ್ ಧರಿಸಿ ಸಭೆಗೆ ಹಾಜರಾಗಿ ಅಚ್ಚರಿ ಮೂಡಿಸಿದರು. ಇನ್ನು ಮೈಸೂರಿನಲ್ಲಿ ಕೊರೋನ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ ಎಂಬ ಹೇಳಿಕೆಯನ್ನ ಜಿಲ್ಲಾ ಆರೋಗ್ಯಧಿಕಾರಿ ನೀಡಿದ್ದಾರೆ.

Key words: Coronavirus- Mysore –city corporation-mayor-tasnim- mask