ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರ: ಹೈಕಮಾಂಡ್ ಮನವೊಲಿಸಲು ಇಂಥ ಕ್ರಮ ಬೇಡ- ಪ್ರಿಯಾಂಕ್ ಖರ್ಗೆ ಟೀಕೆ.

Promotion

ಬೆಂಗಳೂರು,ಮಾರ್ಚ್,18,2022(www.justkannada.in): ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಡೆಯನ್ನ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಕರ್ನಾಟಕ ಪ್ರಗತಿ ಹೊಂದುತ್ತಿರುವ ರಾಜ್ಯ ಹೀಗಾಗಿ ಶಿಕ್ಷಣ ವ್ಯವಸ್ಥೆ ಬದಲಿಸಲು ಹೋಗಬೇಡಿ. ಕೊರೋನಾದಿಂದ ಹಲವು ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಅದ್ಧರಿಂದ  ಗುಣಮಟ್ಟದ ಶಿಕ್ಷಣ  ನೀಡುವತ್ತ ಗಮನಹರಿಸಿ. ಶಾಲಾ ಕಟ್ಟಡ ಸುವ್ಯವಸ್ಥೆ ಬಗ್ಗೆ ಗಮನಹರಿಸಿ. ಹೈಕಮಾಂಡ್ ಮನವೊಲಿಸಲು ಇಂಥ ಕ್ರಮ ಬೇಡ  ಎಂದು ತಿಳಿಸಿದರು.

Key words: Bhagavad Gita-MLA-Priyank kharge