ಬಿಬಿಎಂಪಿ ಪಶ್ಚಿಮ ವಲಯ: ಕೋವಿಡ್ ಟೆಸ್ಟ್ ಸಾವಿರಕ್ಕೆ ಹೆಚ್ಚಿಸಲು ತೀರ್ಮಾನ….

kannada t-shirts

ಬೆಂಗಳೂರು,ಜು,16,2020(www.justkannada.in):  ಬಿಬಿಎಂಪಿ ಪಶ್ಚಿಮ ವಲಯದಲ್ಲಿ‌ ಕೋವಿಡ್ ಶಂಕಿತರ ಮಾದರಿಗಳ ಪರೀಕ್ಷೆ ಸದ್ಯ ದಿನಕ್ಕೆ 250 ಆಗುತ್ತಿದ್ದು ಅದನ್ನು 1,000 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಯಿತು.bbmp-west-zone-increase-covid-test-thousand-dcm-ashwath-narayan

ಪಶ್ಚಿಮ ವಲಯದ ಕೋವಿಡ್ ಉಸ್ತುವಾರಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ್ ಅವರು ಇರೊಫಿನ್ಸ್ ಕ್ಲಿನಿಕಲ್ ಜೆನೆಟಿಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಧಾನಷು ಶ್ರೀವಾಸ್ತವ ಅವರ ಜತೆ ಇಂದು ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದರು.

ಈ ಕುರಿತು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಇರೊಫಿನ್ಸ್ ಸಂಸ್ಥೆ, ಮಾದರಿಗಳ ಪರೀಕ್ಷೆ ಸಾಮರ್ಥ್ಯವನ್ನು 250 ರಿಂದ 1000ಕ್ಕೆ ಹೆಚ್ಚಿಸಿಕೊಂಡಿದ್ದು, ನಾಳೆಯಿಂದಲೇ ಈ ಕೆಲಸ ಮಾಡಲಿದೆ ಎಂದು ಹೇಳಿದರು. ಪಶ್ಚಿಮ ವಲಯದಲ್ಲಿ ಆರು ವಿಧಾನಸಭಾ ಕ್ಷೇತ್ರಗಳು ಇದ್ದು ತಲಾ 150 ಮಾದರಿಗಳನ್ನು ಹೆಚ್ಚುವರಿಯಾಗಿ ಪರೀಕ್ಷೆ ಮಾಡಲಾಗುವುದು. ಇದು ತ್ವರಿತವಾಗಿ ಚಿಕಿತ್ಸೆ ನೀಡಲು ಅನುಕೂಲ ಆಗುತ್ತದೆ ಎಂದರು.bbmp-west-zone-increase-covid-test-thousand-dcm-ashwath-narayan

ಬಿಬಿಎಂಪಿ ಪಶ್ಚಿಮ ವಲಯ ಜಂಟಿ‌ ಆಯುಕ್ತ ಚಿದಾನಂದ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಸಭೆಯಲ್ಲಿ ‌ಹಾಜರಿದ್ದರು.

Key words: BBMP -West Zone- increase – Covid test – thousand-DCM- ashwath narayan

website developers in mysore