ಏರೋ ಇಂಡಿಯಾ : ತ್ರೀ ಭಾಷ ಸೂತ್ರ ಪಾಲಿಸದೆ ಕನ್ನಡ ಮತ್ತೆ ಕಡೆಗಣನೆ.

 

ಬೆಂಗಳೂರು, ಫೆಬ್ರವರಿ 03, 2021 🙁 www.justkannada.in news ) ಶಿವಮೊಗ್ಗದ ಬಳಿಕ ಇದೀಗ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡ ಕಡೆಗಣನೆ. ತ್ರಿಭಾಷಾ ಸೂತ್ರ ಪಾಲನೆ ವಿಷಯದಲ್ಲಿ ಕನ್ನಡಕ್ಕೆ ಮತ್ತೊಮ್ಮೆ ಅಪಮಾನವಾಗಿದೆ.

Bangalore-air-show-kannada-neglected-central-government

ಬೆಂಗಳೂರಿನ ಯಲಹಂಕದಲ್ಲಿ ಇಂದಿನಿಂದ ಆಯೋಜಿಸಿರುವ ಏರೋ ಇಂಡಿಯಾ 2021 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಕನ್ನಡ ಕಣ್ಮರೆಯಾಗಿದೆ. ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಫಲಕ ಮಾತ್ರ ವೇದಿಕೆಯಲ್ಲಿ ರಾರಾಜಿಸುತ್ತಿತ್ತು.
ರಕ್ಷಣಾ‌‌‌ ಸಚಿವ ರಾಜನಾಥ್‌ಸಿಂಗ್ ಅವರು ಯಲಹಂಕದ‌ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಆಯೋಜಿಸಿರುವ ಏರೋ ಇಂಡಿಯಾ 2021ರ ಕಾರ್ಯಕ್ರಮ‌ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

Bangalore-air-show-kannada-neglected-central-government

ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲೂ ಇದೇ ರೀತಿ ಕನ್ನಡ ಕಡೆಗಣಿಸಲಾಗಿತ್ತು. ಇದನ್ನು ಆರ್.ಟಿ.ಐ ಮೂಲಕ ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ, ಕೇಂದ್ರ ಸರಕಾರದ ಕಾರ್ಯಕ್ರಮಗಳಲ್ಲಿ ತ್ರಿಭಾಷಾ ಸೂತ್ರ ಪಾಲಿಸುವಂತಿಲ್ಲ ಎಂಬ ಉತ್ತರ ನೀಡಲಾಗಿತ್ತು. ಈಗ ಅದನ್ನು ಮತ್ತೆ ದೃಢಪಡಿಸುವ ರೀತಿಯಲ್ಲಿ ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಮತ್ತೆ ಕನ್ನಡ ಕಡೆಗಣನೆಯಾಗಿದೆ.

 

key words : Bangalore-air-show-kannada-neglected-central-government