ಹೂಡಿಕೆದಾರರಿಗೆ  ವಂಚನೆ ಆರೋಪ: ಕಣ್ವ ಗ್ರೂಪ್ ನ ಎಂಡಿ ಅರೆಸ್ಟ್…

Promotion

ಬೆಂಗಳೂರು,ನ,1,2019(www.justkannada.in):  ಹೂಡಿಕೆದಾರರಿಗೆ ವಂಚನೆ ಮಾಡಿದ ಆರೋಪದ ಮೇಲೆ ಕಣ್ವ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯರನ್ನ ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಣ್ವ  ಸೌಹಾರ್ದ ಕೋ ಅಪರೇಟಿವ್ ನಿಂದ ಹೂಡಿಕೆದಾರರಿಗೆ ಸುಮಾರು 10,000 ಕೋಟಿ ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದು, ಈ ಕುರಿತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವಿಚಾರಣೆಗಾಗಿ ನಿನ್ನೆ ಕಣ್ವ ಗ್ರೂಪ್ ನ ಎಂಡಿ ನಂಜುಂಡಯ್ಯ ಅವರನ್ನ ಪೊಲೀಸರು ಕರೆಸಿದ್ದರು ಎನ್ನಲಾಗಿದೆ.

ಕಣ್ವ ಗ್ರೂಪ್ ನ ವಿರುದ್ದ ನಾಲ್ಕು ಎಫ್ ಐಆರ್ ಗಳು ದಾಖಲಾಗಿದ್ದು ಇಂದು ಕಣ್ವ ಗ್ರೂಪ್ ನ ಎಂಡಿ ನಂಜುಂಡಯ್ಯ ಅವರನ್ನ ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Key words: Bangalore- accused –fraud-kanva group-MD -Arrest