ಬಿಲ್ಡಿಂಗ್ ಮಾಲೀಕರ ಇಲಾಖೆ ಅಲೆದಾಟಕ್ಕೆ ಬ್ರೇಕ್: ಒಂದೇ ಸಾಫ್ಟ್ ವೇರ್ ನಿಂದ ಎಲ್ಲಾ ಇಲಾಖೆಗಳ ಅನುಮತಿ-ಸಚಿವ ಯುಟಿ ಖಾದರ್ …

Promotion

ಬೆಂಗಳೂರು,ಜೂ,3,2019(www.justkannada.in): ಬಿಲ್ಡಿಂಗ್,ಲೇಔಟ್ ಫ್ಲಾನ್ ಆನ್ ಲೈನ್ ವ್ಯವಸ್ಥೆಯಡಿ ನಗರಾಭಿವೃದ್ಧಿ ಹೊಸ ಸಾಫ್ಟ್ ವೇರ್ ಅಳವಡಿಕೆ ಮಾಡಲಾಗುತ್ತಿದೆ. ಒಂದೇ ಸಾಫ್ಟ್ ವೇರ್ ನಿಂದ ಎಲ್ಲಾ ಇಲಾಖೆಗಳ ಅನುಮತಿ ಸಿಗಲಿದ್ದು, ಬಿಲ್ಡಿಂಗ್ ಮಾಲೀಕರ ಇಲಾಖೆ ಅಲೆದಾಟಕ್ಕೆ ಇನ್ಮುಂದೆ ಬ್ರೇಕ್ ಬೀಳಲಿದೆ ಎಂದು ನಗರಾಭಿವೃದ್ದಿ ಸಚಿವ ಯುಟಿ ಖಾದರ್ ತಿಳಿಸಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಯು.ಟಿ.ಖಾದರ್, ಬಿಲ್ಡಿಂಗ್,ಲೇಔಟ್ ಫ್ಲಾನ್ ಆನ್ ಲೈನ್ ವ್ಯವಸ್ಥೆಯಡಿ ನಗರಾಭಿವೃದ್ಧಿ ಹೊಸ ಸಾಫ್ಟ್ ವೇರ್ ಅಳವಡಿಕೆ ಮಾಡಲಾಗುತ್ತಿದೆ. ಒಂದೇ ಸಾಫ್ಟ್ ವೇರ್ ನಲ್ಲಿ ಹಲವು ಇಲಾಖೆ ಕೆಲಸ ಆಗಲಿದ್ದು, ಒಂದೇ ಸಾಫ್ಟ್ ವೇರ್ ನಿಂದ ಎಲ್ಲಾ ಇಲಾಖೆಗಳ ಅನುಮತಿ ಪಡೆಯಬಹುದು. ಎನ್ ಒಸಿ ಪಡೆದುಕೊಳ್ಳಲು ಮೊದಲು ಎಲ್ಲಾ ಇಲಾಖೆಗಳಿಗೆ ಅಲೆಯಬೇಕಿತ್ತು. ಆದರೆ ಈಗ ಅಲೆಯಬೇಕಿಲ್ಲ. ಈಗ ಒಂದು ತಿಂಗಳಲ್ಲೇ ಅನುಮತಿ ಪತ್ರ ರವಾನೆಯಾಗಲಿದ್ದು ೩೦/೪೦ ಸೈಟ್ ಮನೆ ಕಟ್ಟುವವರಿಗೂ ಅನುಕೂಲವಾಗಲಿದೆ. ಎಲ್ಲಾ ಇಲಾಖೆಗಳ ಅನುಮತಿ ಒಂದೇ ಗವಾಕ್ಷಿಯಡಿ ಸಿಗಲಿದೆ ಎಂದು ಯುಟಿ ಖಾದರ್ ತಿಳಿಸಿದರು.

ಕಟ್ಟಡ ಮಾಲೀಕರು ಒಮ್ಮೆ ಅಫ್ಲೈ ಮಾಡಬೇಕು. ಸಂಬಂಧಿಸಿದ ಎಲ್ಲಾ ಇಲಾಖೆಯವರು ಒಂದೇ ಭಾರಿ ಭೇಟಿ  ಮಾಡಿ ಪರಿಶೀಲಿಸಿ ಅನುಮತಿ ನೀಡುತ್ತಾರೆ. ಈ ಸಂಬಂಧ ಆನ್ ಲೈನ್ ನಲ್ಲೇ ಫೀಸ್ ಪೇ ಮಾಡಬೇಕು. ಇದರಿಂದ ಮಧ್ಯವರ್ತಿಗಳ ಕಾಟವೂ ತಪ್ಪಲಿದೆ. ಒಂದೇ ದಿನ ಸೈಸ್ ಇನ್ಪೆಕ್ಷ ನ್ ಮಾಡಲಾಗುತ್ತದೆ. ಈ ಮೊದಲು ಇಲಾಖೆಯಿಂದ ಇಲಾಖೆಗೆ ಸಾಕಷ್ಟು ತಿರುಗಬೇಕಿತ್ತು. ಆದರೆ ಒಂದು ಅರ್ಜಿ ಹಾಕಿದರೆ ಎಲ್ಲರೂ ಒಂದೇ ಭಾರಿ ಬರ್ತಾರೆ. ಪರಿಶೀಲಿಸಿ ಕಟ್ಟಡ ಕಟ್ಟೋಕೆ ಅನುಮತಿ ನೀಡ್ತಾರೆ. ಇದು ನಾಗರೀಕರಿಗೆ ವರದಾನವಾಗಲಿದೆ ಎಂದು ಸಚಿವ ಯುಟಿ ಖಾದರ್ ಮಾಹಿತಿ ನೀಡಿದರು.

Key words:  All Departments permit from the  one software- Minister UT Khader.

#Bangalore  #utkhadar #buildingowner #permit #Departments