80 ಕೋಟಿ ಕೊಟ್ರೆ ನಿಮ್ಮೊಂದಿಗೆ ಇರ್ತೀವಿ ಅಂದಿದ್ರು ರಮೇಶ್ ಜಾರಕಿಹೊಳಿ-ತಮಗೆ ಬಿಜೆಪಿ ಆಫರ್ ನೀಡಿದ್ದ ಬಗ್ಗೆ ಹೊಸಬಾಂಬ್ ಸಿಡಿಸಿದ ಜೆಡಿಎಸ್ ಶಾಸಕ ಕೆ.ಮಹದೇವ್…

Promotion

ಮೈಸೂರು,ಜು,3,2019(www.justkannada.in): 80 ಕೋಟಿ ಕೊಟ್ಟರೆ ನಿಮ್ಮೊಂದಿಗೆ ಇರ್ತಿವಿ ಎಂದು  ಶಾಸಕ ರಮೇಶ್ ಜಾರಕಿಹೊಳಿ  ಬೇಡಿಕೆ ಇಟ್ಟಿದ್ದರು ಎಂದು ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್ ಹೊಸ ಬಾಂಬ್ ಸಿಡಿಸಿದ್ದಾರೆ.

ಪಿರಿಯಾಪಟ್ಟಣದಲ್ಲಿ  ನಡೆದ ಸಭೆಯೊಂದರಲ್ಲಿ ಮಾತನಾಡುತ್ತ ಈ  ವಿಚಾರ ತಿಳಿಸಿದ ಶಾಸಕ ಮಹದೇವ್,  ರಮೇಶ್‌ ಜಾರಕಿಹೊಳಿಯವರು ನನಗೆ ಕೋಟಿ ನೀಡಿದರೆ ನಾನು ಪಕ್ಷವನ್ನು ಬಿಡೋದಿಲ್ಲ ಅಂತ ಹೇಳಿದ್ದರು. ಹಾಗೆಯೇ ಬಿಜೆಪಿಯಿಂದ ನನಗೂ ಆಫರ್ ಬಂದಿತ್ತು.

30ರಿಂದ 40 ಕೋಟಿ ಕೊಡ್ತೀವಿ ಬಿಜೆಪಿಗೆ ಬನ್ನಿ ಎಂದು ಆಮಿಷ ಒಡ್ಡಿದ್ದರು. ಹಣವನ್ನ ನನ್ನ ಟೇಬಲ್ ಮೇಲೆಯೇ ಇಟ್ಟಿದ್ದರು. ಆಗ ನಾನು ಎಸಿಬಿಗೆ ಹೇಳಬೇಕಾ ಎಂದು ಹೆದರಿಸಿದೆ. ಆ ವೇಳೆ ಅವರು ಹಣ ತೆಗೆದುಕೊಂಡು ಹೋದರು. ಸತ್ತ ಮೇಲೆ ನಾನು ಹಣವನ್ನು ತೆಗೆದುಕೊಂಡು ಹೋಗೋದಿಲ್ಲ ಅಂತ ನಂಬಿಕೊಂಡಿರುವನು.  ನಾನು ಹೀಗಾಗಿ ನಾನು ಹಣಕ್ಕಾಗಿ ಆಸೆ ಪಡಲಿಲ್ಲ ಅಂತ ಶಾಸಕ ಮಹದೇವ್ ತಿಳಿಸಿದರು.

key words: 80 crore – Ramesh jarakiholi-JDS MLA-N.Mahadev – new bomb