ವಿವೇಕಾನಂದರ ಹಾದಿಯಲ್ಲಿ ಪ್ರಧಾನಿ ಮೋದಿ ನಡೆಯುತ್ತಿದ್ದಾರೆ-ಸಿಎಂ ಬೊಮ್ಮಾಯಿ ನುಡಿ.  

Promotion

ಹುಬ್ಬಳ್ಳಿ,ಜನವರಿ,12,2022(www.justkannada.in):  ಸ್ವಾಮಿ ವಿವೇಕಾನಂದರ  ಹಾದಿಯಲ್ಲಿ ಪ್ರಧಾನಿ ಮೋದಿ ನಡೆಯುತ್ತಿದ್ದಾರೆ ಯುವಜನರನ್ನ ಸಜ್ಜುಗೊಳಿಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಆಯೋಜಿಸಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವನ್ನ ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ವೇಳೆ ಪ್ರಧಾನಿ ಮೋದಿಗೆ ಸಿಎಂ ಬೊಮ್ಮಾಯಿ ಸೇರಿ ಕೇಂದ್ರ ಸಚಿವರು ಸನ್ಮಾನಿಸಿದರು.

ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಸ್ವಾಮಿ ವಿವೇಕಾನಂದರು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ದೇಶದಲ್ಲಿ ಶೇ.40 ರಷ್ಟು ಯುವಕರು ಇದ್ದಾರೆ. ಕರ್ನಾಟಕ ಸರ್ಕಾರ ಯವಕರಿಗೆ ಯುವಶಕ್ತಿ ಯೋಜನೆ ಜಾರಿ ಮಾಡಿದೆ. ರಾಷ್ಟ್ರೀಯ ಯುವಜನ ಮೇಳ ಯಶಸ್ಸಿಗೆ ಪ್ರಧಾನಿ ಮೋದಿ ಕಾರಣ  ಯುವ ಸಮೂಹಕ್ಕೆ  ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಯೋಜನೆ ಜಾರಿ ಮಾಡಲಾಗಿದೆ.  ಯುವಕರನ್ನ ದೇಶ ಕಟ್ಟಲು ಬಳಸಿಕೊಳ್ಳಲು ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

Key words: hubli- PM Modi – swamy Vivekananda – CM Bommai