Wednesday, August 5, 2026

BDA Apartments

Home Front Page ಉಮೇಶ್ ಕತ್ತಿ ಎಂಎಲ್ ಎ ಆದಾಗಿನಿಂದಲೂ ನನಗೆ ಆತ್ಮೀಯ: ಸ್ನೇಹಕ್ಕೆ ಬೆಲೆ ಕೊಡುವ ವ್ಯಕ್ತಿ- ಮಾಜಿ...

ಉಮೇಶ್ ಕತ್ತಿ ಎಂಎಲ್ ಎ ಆದಾಗಿನಿಂದಲೂ ನನಗೆ ಆತ್ಮೀಯ: ಸ್ನೇಹಕ್ಕೆ ಬೆಲೆ ಕೊಡುವ ವ್ಯಕ್ತಿ- ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಳಗಾವಿ,ಸೆಪ್ಟಂಬರ್,7,2022(www.justkannada.in):  ಉಮೇಶ್ ಕತ್ತಿ ಎಂಎಲ್ ಎ ಆದಾಗಿನಿಂದಲೂ ನನಗೆ ಆತ್ಮೀಯ. ಅವರು ಸ್ನೇಹಕ್ಕೆ ಬಹಳ ಬೆಲೆ ಕೊಡುವ ವ್ಯಕ್ತಿ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸ್ಮರಿಸಿದರು.

ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಲ್ಲದ ಬಾಗೇವಾಡಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗಮಿಸಿದ್ದು ಬೆಳಗಾವಿ ಏರ್ ಪೋರ್ಟ್ ನಲ್ಲಿ ಮಾತನಡಿದ ಅವರು, ಬೇರ  ಪಕ್ಷದಲ್ಲಿದ್ದರೂ ನಮ್ಮಲ್ಲಿ ಸ್ನೇಹ, ಆತ್ಮಿಯತೆ ಇತ್ತು. ಕಳೆದ ಅಧಿವೇಶನದ ವೇಳೆ  ಉಮೇಶ್ ಕತ್ತಿ ಮನೆಗೆ ಕರೆದು ಊಟ ಹಾಕಿದ್ದರು.  ಅವರು ನೇರವಾಗಿ ಮಾತನಾಡುವ ವ್ಯಕ್ತಿ. ಉತ್ತರ ಕರ್ನಾಟಕದ ಬಗ್ಗೆ ಅಪಾರ  ಕಾಳಜಿ ಇತ್ತು ಎಂದು ಹೇಳಿದರು.

ಸ್ವಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ಮೆರವಣಿಗೆ ಮೂಲಕ ಪಾರ್ಥೀವ ಶರೀರವನ್ನ ತರಲಾಗುತ್ತಿದೆ.  ದಾರಿಯುದ್ದಕ್ಕೂ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದು ಕಣ್ಣೀರಿನ ವಿದಾಯ ಹೇಳುತ್ತಿದ್ದಾರೆ.  ಕೆಲವೇ ಹೊತ್ತಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

Key words:  Umesh Katthi – values –friendship-Former CM –Siddaramaiah- Belgaum