ಉಮಾಶ್ರೀ, ಎಂ.ಆರ್.ಸೀತಾರಾಂ, ಸುಧಾಮ್ ದಾಸ್ ವಿಧಾನ ಪರಿಷತ್’ಗೆ ನಾಮನಿರ್ದೇಶನ: ರಾಜ್ಯಪಾಲರ ಅಂಕಿತ

ಬೆಂಗಳೂರು, ಆಗಸ್ಟ್ 20, 2023 (www.justkannada.in): ಮಾಜಿ ಸಚಿವೆ ಉಮಾಶ್ರೀ, ಎಂ.ಆರ್.ಸೀತಾರಾಂ ಹಾಗೂ ಸುಧಾಮ್​ದಾಸ್ ಪರಿಷತ್​ ಅವರನ್ನು ಕಾಂಗ್ರೆಸ್​ ವಿಧಾನಪರಿಷತ್​ಗೆ ನಾಮನಿರ್ದೇಶನ ಮಾಡಿದೆ. ಇದಕ್ಕೆ ರಾಜ್ಯಪಾಲರ ಅಂಕಿತ ಹಾಕಿದ್ದಾರೆ.

ಈ ಕುರಿತು ರಾಜ್ಯಪಾಲರ ಅಂಕಿತ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಗೊಂಡಿದೆ.

ಸುಧಾಮ್​ದಾಸ್ ನೇಮಕಕ್ಕೆ ಪಕ್ಷದ ಹಿರಿಯ ಸಚಿವರಿಂದಲೇ ವಿರೋಧ ವ್ಯಕ್ತವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಬೆಂಬಲಿತ ಸುಧಾಮ್ ದಾಸ್ ನೇಮಕಕ್ಕೆ ಹಿರಿಯ ಸಚಿವರು ಬಹಿರಂಗವಾಗಿ ಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ನಟಿ ಉಮಾಶ್ರೀ ಸೇರಿದಂತೆ ಮೂವರು ವಿಧಾನಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶನಕ್ಕೆ ರಾಜ್ಯಪಾಲರ ಅಂಕಿತವೂ ಸಿಕ್ಕಿದೆ.