ನಾನೆಲ್ಲೂ ಅಡಗಿಲ್ಲ: ನಾನು ಯಾರಿಗೂ ಹೆದರಲ್ಲ ಎಂದ ಉಕ್ರೇನ್ ಅಧ್ಯಕ್ಷ ಝೆಲನ್ ಸ್ಕಿ.

ಕೀವ್,ಮಾರ್ಚ್,8,2022(www.justkannada.in):  ಉಕ್ರೇನ್ ಮೇಲೆ ರಷ್ಯಾ 13ನೇ ದಿನವೂ ತನ್ನ ದಾಳಿ ಮುಂದುವರೆಸಿದ್ದು ಈ ಮಧ್ಯೆ ಉಕ್ರೇನ್ ಅಧ್ಯಕ್ಷ ಝೆಲ್ ಸ್ಕಿಯನ್ನ ಟಾರ್ಗೆಟ್ ಮಾಡಿದೆ ಎನ್ನಲಾಗಿದೆ.

ಈ ಯುದ್ಧದ ನಡುವೆ ವಿಡಿಯೋ ಬಿಡುಗಡೆ ಮಾಡಿರುವ ಉಕ್ರೇನ್ ಅಧ್ಯಕ್ಷ ಝೆಲನ್ ಸ್ಕಿ, ನಾನಲ್ಲೂ ಅಡಗಿಲ್ಲ ನಾನು ಯಾರಿಗೂ ಹೆದರಲ್ಲ  ಕೀವ್ ನಲ್ಲಿಯೇ ನಾನು ಇದ್ದೇನೆ.  ನಾವು ಈ ಯುದ್ಧ ಗೆಲ್ಲೋವರೆಗೂ ಇಲ್ಲೇ ಇರುತ್ತೇನೆ ಎಂದು  ಝೆಲೆನ್ ಸ್ಕಿ ಹೇಳಿದ್ದಾರೆ.

ಇನ್ನು ಇಂದು ಸಹ ಐದು ನಗರಗಳಲ್ಲಿ ರಷ್ಯಾ ಮತ್ತೆ ಕದನ ವಿರಾಮ ಘೋಷಿಸಿದೆ.   ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ಗೆ ವಿಶ್ವಸಂಸ್ಥೆ 700 ಮಿಲಿಯನ್ ಡಾಲರ್ ನೆರವು  ನೀಡಿದೆ ಎನ್ನಲಾಗಿದೆ.

Key words: Ukraine-russia-war