ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಜ.22 ರಂದು ಗಡಿ ಬಂದ್ ಮಾಡಿ ಪ್ರತಿಭಟನೆಗೆ ನಿರ್ಧಾರ…

ಬೆಂಗಳೂರು,ಜನವರಿ,20.2021(www.justkannada.in):  ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಜನವರಿ 22 ರಂದು ಬೆಳಗಾವಿ ಮಹಾರಾಷ್ಟ್ರ ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲು  ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.jk

ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನೇತೃತ್ವದಲ್ಲಿ ವುಡ್ ಲ್ಯಾಂಡ್‌ ಹೋಟೆಲ್ ನಲ್ಲಿ ಕನ್ನಡಪರ ಹೋರಾಟಗಾರರ ಸಭೆ ನಡೆಯಿತು. ಸಭೆಯಲ್ಲಿ  ಬಿಟಿ. ಲಲಿತಾನಾಯಕ್. ಕಅಪ್ರಾ ಮಾಜಿ ಅಧ್ಯಕ್ಷ ಮುಮ ಚಂದ್ರು. ಡಾ॥ ರಾಜ್ ಅಭಿಮಾನಿ ಸಂಘದ ಸಾರಾ ಗೋವಿಂದು. ಕಜಾವೇ ಮಂಜುನಾಥ್ ದೇವ. ಗಿರೀಶ್ ಗೌಡ. ನಾರಾಯಣ ಸ್ವಾಮಿ. ಅಮ್ಮಿ ಚಂದ್ರು. ಕನ್ನಡ ಕೃಷ್ಣ. ಜಿಎಂ.ರಾಮು ಪಾರ್ಥಸಾರಥಿ. ವೇಣುಗೋಪಾಲ್ ಬಾಲಾಜಿ ಕೃಷ್ಣಮೂರ್ತಿ, ಮುನ್ನಾವರ ವಿಶ್ವನಾಥ್ ಗೌಡ, ಮುಭಾರಕ್ ಪಾಷಾ, ಜಾಫರ್ ಸಾಧಿಕ್, ಸತೀಶ್ ನಾಯ್ಡು,  ನರಸಿಂಹಮೂರ್ತಿ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.Uddhav Thackeray- statement -Decision -protests - Belgaum Maharashtra- border bandh- vatal nagaraj

ಮರಾಠಿ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ  ಹಾಗೂ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಹೇಳಿಕೆ ಖಂಡಿಸಿ. ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಜನವರಿ 30 ರಂದು  ರಾಜ್ಯಾದ್ಯಂತ ರೈಲು ತಡೆ ಚಳವಳಿ ಹಾಗೂ ಉದ್ದವ್ ಠಾಕ್ರೆ ಹೇಳಿಕೆ ಖಂಡಿಸಿ ಜನವರಿ  22 ರಂದು ಬೆಳಗಾವಿ ಮಹಾರಾಷ್ಟ್ರ ಗಡಿ ಬಂದ್, ಅತ್ತಿಬೆಲೆ ಗಡಿ ಬಂದ್ ಮಾಡಲು ನಾಯಕರುಗಳು ಒಕ್ಕೊರಲಿನ ತೀರ್ಮಾನ ಕೈಗೊಂಡಿದ್ದಾರೆ.

Key words: Uddhav Thackeray- statement -Decision -protests – Belgaum Maharashtra- border bandh- vatal nagaraj