ಮೈಸೂರು, ಡಿ.೧೭,೨೦೨೫: ನಗರದ “ಯು- ಡಿಜಿಟಲ್’ ಸಂಸ್ಥೆಯಿಂದ ಹೊಸ ಐಪಿಟಿವಿ ಹಾಗೂ ಒಟಿಟಿ ಸೇವೆ ಆರಂಭ. ಸುಧಾರಿತ ಡಿಜಿಟಲ್ ಪ್ರಸಾರ ವ್ಯವಸ್ಥೆಯನ್ನು ಜನತೆಗೆ ಮುಟ್ಟಿಸುವ ಉದ್ದೇಶದಿಂದ ಮೈಸೂರಿನ ‘ಯೂ ಡಿಜಿಟಲ್’ ಸಂಸ್ಥೆ ತನ್ನ ಹೊಸ ಐಪಿಟಿವಿ ಸೇವೆಯನ್ನು ಇದೇ ಭಾನುವಾರ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿತು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೊಸ ಐಪಿ ಟಿವಿ ಸೇವೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮಾಧ್ಯಮಲೋಕದ ಹಿರಿಯರು ಹಾಗೂ ವಿವಿಧ ಕ್ಷೇತ್ರಗಳ ಮುಖ್ಯಸ್ಥರು ಭಾಗಿಯಾಗಿ ಶುಭ ಹಾರೈಸಿದರು.

ಓಟಿಟಿ ಹಾಗೂ ಐಪಿ ಟಿವಿ ಬಿಡುಗಡೆ ಕಾರ್ಯಕ್ರಮದಲ್ಲಿ “ ನ್ಯೂಸ್ ಫಸ್ಟ್” ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್.ಎಸ್, ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್, ರಿಪಬ್ಲಿಕ್ ಟಿವಿ ಮುಖ್ಯಸ್ಥ ಕಿಶನ್ ಛೀ ರಂಡ, ಟಿವಿ೯ ಕನ್ನಡ ಮುಖ್ಯಸ್ಥ ರಾಹುಲ್ ಚೌದರಿ, ನ್ಯೂಸ್ ೧೮ ಕನ್ನಡ ಸಂಪಾದಕ ಹರಿಪ್ರಸಾದ್ ಭಾಗವಹಿಸಿದ್ದರು.

ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ಹಿರಿಯ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಸಮಾರಂಭದಲ್ಲಿ ಭಾಗವಹಿಸಿ, ಪ್ರಸ್ತುತ ವಿದ್ಯಮಾನದಲ್ಲಿ ತಂತ್ರಜ್ಞಾನದ ಮಹತ್ವ ಹಾಗೂ ಕೇಬಲ್ ಉದ್ಯಮದಲ್ಲಿ ಕಂಡುಬರುತ್ತಿರುವ ಮಹತ್ತರ ಬೆಳವಣಿಗೆಗಳ ಕುರಿತಾಗಿ ವಿಚಾರ ವಿನಿಮಯ ಮಾಡಿದರು.
ಮೈಸೂರು ಮೂಲದಿಂದ ಆರಂಭಗೊಂಡ “ಯು-ಡಿಜಿಟಲ್ “ ನ ಈ ಹೊಸ ಪ್ರಯತ್ನಕ್ಕೆ ಗಣ್ಯರು ಶುಭಹಾರೈಸಿದರು. ಮುಂಬರುವ ದಿನಗಳಲ್ಲಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಮತ್ತಷ್ಟು ಹೊಸ ಸೇವೆಗಳನ್ನ ಕಲ್ಪಿಸುವ ಭರವಸೆಯನ್ನ ಯೂಡಿಜಿಟಲ್ ಮುಖ್ಯಸ್ಥ ಕೆ.ಮಂಜುನಾಥ್ ನೀಡಿದರು.
key words: “U-Digital”, grand ceremony, Launch, IPTV, OTT services, Mysore, Yadhuveer, MP, BJP

SUMMARY:
“U-Digital” holds grand ceremony: Launch of new IPTV and OTT services.

New IPTV and OTT service launched by the city’s “U-Digital”. With the aim of bringing advanced digital broadcasting system to the people, Mysore’s ‘U Digital’ officially launched its new IPTV service on Sunday. Mysore-Kodagu Lok Sabha constituency MP Yaduveer Krishnadatta Chamaraja Wodeyar officially inaugurated the new IPTV service at a function held at a private hotel in the city. Senior figures from the media world and heads of various sectors participated in the event and wished them well.





