ಬೆಂಗಳೂರು,ಅಕ್ಟೋಬರ್,28,2025 (www.justkannada.in): ಬೆಂಗಳೂರಿನಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಈ ನಡುವೆ ಇಬ್ಬರು ಯುವಕರು ಹಿಟ್ ಅಂಡ್ ರನ್ ಗೆ ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯದಲ್ಲಿ ನಡೆದಿದೆ.
ತೂಬಗೆರೆ ನಿವಾಸಿ ನಂದನ್ ಕುಮಾರ್ (22) ಹಾಗೂ ದೊಡ್ಡ ತಿಮ್ಮನಹಳ್ಳಿಯ ರವಿಕುಮಾರ್ (24) ಮೃತ ಯುವಕರು. ಮೃತರು ದೊಡ್ಡಬಳ್ಳಾಪುರ ನಗರದ ಎಲ್ ಅಂಡ್ ಟಿ ಕಂಪನಿಯ ಸಿಬ್ಬಂದಿಗಳು ಎಂದು ತಿಳಿದುಬಂದಿದೆ.
ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿಯಾಗಿದ್ದು ಈ ಪರಿಣಾಮ ನಂದನ್ ಕುಮಾರ್ ಮತ್ತು ರವಿಕುಮಾರ್ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.
Key words: Two youths, death, hit-and-run, Bangalore







