ಐಪಿಎಲ್’ಗೆ ಮತ್ತೆರಡು ಹೊಸ ಟೀಂ: ಲಕ್ನೋ, ಅಹಮ್ಮದಾಬಾದ್ ಎಂಟ್ರಿ

ಬೆಂಗಳೂರು, ಅಕ್ಟೋಬರ್ 26, 2021 (www.justkannada.in): ಬಿಸಿಸಿಐ ಐಪಿಎಲ್ ಗೆ ಹೊಸ ಎರಡು ತಂಡಗಳನ್ನು ಸೇರ್ಪಡೆಗೊಳಿಸಿದ್ದು, ಅದರ ಬಗ್ಗೆ ನಿನ್ನೆ ಸಂಜೆ ಅಧಿಕೃತ ಘೋಷಣೆ ಹೊರಡಿಸಿದೆ.

ಲಕ್ನೋ ಮತ್ತು ಅಹಮ್ಮದಾಬಾದ್ ಹೊಸದಾಗಿ ಸೇರ್ಪಡೆಯಾಗಿರುವ ತಂಡಗಳು. ಈ ಎರಡೂ ತಂಡಗಳನ್ನು ಸಂಜೀವ್ ಗೊಯೆಂಕಾ ಅವರ ಆರ್ ಪಿಜಿಎಸ್ ಸಂಸ್ಥೆ ಮತ್ತು ಸಿವಿಸಿ ಸಂಸ್ಥೆ ಖರೀದಿಸಿದೆ.

ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದು, ಮತ್ತೆರಡು ತಂಡಗಳನ್ನು ಐಪಿಎಲ್ ಗೆ ಸೇರಿಸುವ ಮೂಲಕ ಐಪಿಎಲ್ ನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ಮತ್ತು ಭಾರತದ ಮತ್ತಷ್ಟು ದೇಶೀಯ ಕ್ರಿಕೆಟಿಗರನ್ನು ಅಂತಾರಾಷ್ಟ್ರೀಯ ದರ್ಜೆಗೆ ಸಿದ್ಧಗೊಳಿಸುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ.

ಲಕ್ನೋ ತಂಡವನ್ನು ಆರ್ ಪಿಎಸ್ ಜಿ 7 ಸಾವಿರ ಕೋಟಿ ರೂ. ಗೆ ಮತ್ತು ಅಹಮ್ಮದಾಬಾದ್ ತಂಡವನ್ನು ಸಿವಿಸಿ ಸಂಸ್ಥೆ 5.6 ಸಾವಿರ ಕೋಟಿ ರೂ.ಗೆ ಖರೀದಿ ಮಾಡಿದೆ.

ENGLISH SUMMARY…

Two more new teams added to IPL: Lucknow, Ahmedabad make an entry
Bengaluru, October 26, 2021 (www.justkannada.in): The Board of Cricket Control in India (BCCI) has announced the inclusion of two new teams to IPL.
The two new teams that are included in the IPL are Lucknow and Ahmedabad. The RPGS and CVC Companies led by Sanjeev Goenka have purchased both of these teams.
BCCI President Sourav Ganguly has informed that the BCCI aims to take the IPL tournament to the international level by including two more teams and promoting more Indian cricketers at the international level.
While the RPGS purchased the Lucknow team for Rs. 7,000 crores, the CVC purchased the Ahmedabad team for Rs. 5.6 crore.
Keywords: IPL/ two new teams included/ Lucknow/ Ahmedabad/ BCCI