ಇಬ್ಬರು ಶಾಸಕರು ರಾಜೀನಾಮೆ ವಿಚಾರ: ಬಿಜೆಪಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಸಚಿವ ಜಿ.ಟಿ ದೇವೇಗೌಡ…

ಮೈಸೂರು,ಜು,2,2019(www.justkannada.in):  ರಾಜ್ಯ ಸಮ್ಮಿಶ್ರ ಸರ್ಕಾರದ ಇಬ್ಬರು ಶಾಸಕರು ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರ ಭರ್ಜರಿ ಬ್ಯಾಟಿಂಗ್ ಮಾಡಿರುವ  ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರು, ಮೋದಿ,ಅಮೀತ್ ಷಾ ಯಾರ ರಾಜೀನಾಮೆಯನ್ನು ಕೊಡಿಸೋಕೆ ಹೋಗಿಲ್ಲ. ಅವರು ಎದುರಾಳಿ ಸರ್ಕಾರಕ್ಕೆ ಅಭದ್ರತೆ ಸೃಷ್ಟಿಸೋ ಕೆಲಸ ಮಾಡ್ತಿಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ,  ಸರ್ಕಾರ ಬಿಳಿಸೋದು ಬಿಜೆಪಿ ರಾಜ್ಯ ನಾಯಕರ ಕೈಯಲ್ಲಿ ಇಲ್ಲ. ಅದೇನಿದ್ದರೂ ಅಮೀತ್ ಷಾ ಹಾಗೂ ಮೋದಿಯವರ ಕೈಯಲ್ಲಿದೆ. ಬಿಜೆಪಿ ಸರ್ಕಾರ ರಚನೆ ಮಾಡೋ‌ ನಿರ್ಧಾರ ನರೇಂದ್ರ ಮೋದಿ ನಿರ್ದೇಶನ ಇದ್ರೆ ಮಾತ್ರ. ಬೇರೆ ಯಾರ ನಿರ್ದೇಶನ ಇದ್ರು ಅಧಿಕೃತ ಅಲ್ಲ. ಬಿಜೆಪಿಯವರ ಮೇಲೆ ಯಾರು ಕೇಸರೇರೆಚೋ ಹಂಗಿಲ್ಲ ಎಂದು ತಿಳಿಸಿದರು.

ಮೋದಿ,ಅಮೀತ್ ಷಾ ಬಜೆಟ್ ಹಾಗೂ ಅಧಿವೇಶನ ಕಡೆ ಗಮನ ಹರಿಸಿದ್ದಾರೆ.  ಕಾಶ್ಮಿರ ಸಮಸ್ಯೆ, ಅಮೇರಿಕಾ, ಚೈನಾ ಜೊತೆ ಮಾತುಕತೆಯಲ್ಲಿ ಮಗ್ನರಾಗಿದ್ದಾರೆ. ಹೀಗಾಗಿ ಅವರು ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಅಭದ್ರತೆ ಸೃಷ್ಟಿಸೋ ಕೆಲಸ ಮಾಡ್ತಿಲ್ಲ ಎಂದು ನುಡಿದರು.

ಜೆಡಿಎಸ್ ಶಾಸಕರೂ ಸಹ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಸುದ್ದಿ ಹರಡಿರುವ ಕುರಿತು ಸ್ಪಷ್ಟನೆ ನೀಡಿದ ಸಚಿವ ಜಿ.ಟಿ ದೇವೇಗೌಡ, ಜೆಡಿಎಸ್‌ನಲ್ಲಿ ಯಾರು ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್‌ನಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ಹೊಸದಲ್ಲ. ಆನಂದ್‌ಸಿಂಗ್ ರಾಜೀನಾಮೆ ಪಾಪ ಅವರಿಗೇನು ಕಷ್ಟ ಇತ್ತೋ ಗೊತ್ತಿಲ್ಲ ಎಂದರು.

Key words: Two –MLA-resign-  G, T Deve Gowda-batting – BJP.