ಇಬ್ಬರು ಪತ್ರಕರ್ತರು ನಿಧನ..

ಹಾಸನ/ ಚಿತ್ರದುರ್ಗ,ಜೂ,3,2019(www.justkannada.in): ಚನ್ನರಾಯಪಟ್ಟಣ ತಾಲ್ಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಕನ್ನಡ ಪ್ರಭ ವರದಿಗಾರ ಮಾದಿಹಳ್ಳಿ ವೆಂಕಟೇಶ್ ಮತ್ತು ಚಿತ್ರದುರ್ಗ  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಸಮಿತಿ ಸದಸ್ಯ ಮಹಂತೇಶ್ ನಿಧನರಾಗಿದ್ದಾರೆ.

ಕನ್ನಡ ಪ್ರಭ ವರದಿಗಾರ ಮಾದಿಹಳ್ಳಿ ವೆಂಕಟೇಶ್ ಅಪಘಾತದಲ್ಲಿ ಗಾಯಗೊಂಡು ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ವೆಂಕಟೇಶ್ ಕುಟುಂಬಕ್ಕೆ ಮೊನ್ನೆಯಷ್ಟೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಸಂಘದಿಂದ 25ಸಾವಿರ ನೆರವು ನೀಡಲಾಗಿತ್ತು. ಇದೀಗ ಮಾದಿಹಳ್ಳಿ ವೆಂಕಟೇಶ್  ಸಾವನ್ನಪ್ಪಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಸಮಿತಿ  ಸದಸ್ಯ ಹಾಗೂ ಜನಸಾಗರ ಪತ್ರಿಕೆಯ  ಮಹಂತೇಶ್  ಇಂದು ಬೆಳಗಿನ ಜಾವ ಲೋ ಬಿಪಿ ಯಿಂದಾಗಿ ಸಾವನ್ನಪ್ಪಿದ್ದಾರೆ.

Key words: Two journalists died.

#Hassan #chitradurga  #journalist  #dead