ಕಾಂಗ್ರೆಸ್ ಪಕ್ಷಕ್ಕೆ ಇವರಿಬ್ಬರು ಭ್ರಷ್ಟಾಚಾರದ ಮೂಲಕ ಘನತೆ ಹೆಚ್ಚಿಸಿದ್ದಾರೆ- ರಾಜ್ಯ ಬಿಜೆಪಿ ಟಾಂಗ್.

ಬೆಂಗಳೂರು,ಸೆಪ್ಟಂಬರ್,20,2022(www.justkannada.in):  ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಟ್ವೀಟ್ ಸಮರ ಮುಂದುವರೆದಿದ್ದು ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ರಾಜ್ಯ ಬಿಜೆಪಿ ಟಾಂಗ್ ನೀಡಿದೆ.

ಒಂದೆಡೆಯಲ್ಲಿ ಇ‌.ಡಿ ವಿಚಾರಣೆ ಎದುರಿಸುತ್ತಿರುವ ಡಿ.ಕೆ ಶಿವಕುಮಾರ್,  ಮತ್ತೊಂದೆಡೆಯಲ್ಲಿ ಸದನದಲ್ಲಿ ಭ್ರಷ್ಟಾಚಾರ ಕುರಿತಂತೆ ಮುಜುಗರಕ್ಕೆ ಒಳಗಾದ ಸಿದ್ಧರಾಮಯ್ಯ, ಈಗ ರಾಜ್ಯದ ಜನರ ಮುಂದೆ ಇವರ ನಾಟಕಕ್ಕೆ ತೆರೆ ಬಿದ್ದಿದೆ. ಪಕ್ಷದ ಅಧ್ಯಕ್ಷರೇ ಬೇಲ್ ಮೇಲೆ ಇರುವ ಕಾಂಗ್ರೆಸ್ ಪಕ್ಷಕ್ಕೆ ಇವರಿಬ್ಬರು ಭ್ರಷ್ಟಾಚಾರದ ಮೂಲಕ ಘನತೆ ಹೆಚ್ಚಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಲೇವಡಿ ಮಾಡಿದೆ.

Key words: two – increased -dignity – Congress – corruption – BJP