ಬೆಂಗಳೂರು,ಮಾರ್ಚ್,17,2021(www.justkannada.in): ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್ ಗಳನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಯುಚೋಹುಕ್ವು ಮಾರ್ಕ್ ಮೌರಿಸ್, ಜೋಸೆಫ್ ಡುಕ್ವೆ ಒಕಾಫಾರ್ ಬಂಧಿತ ಡ್ರಗ್ಸ್ ಪೆಡ್ಲರ್ ಗಳು. ಬಂಧಿತರ ಬಳಿ ಇದ್ದ 65 ಲಕ್ಷ ಮೌಲ್ಯದ ಡ್ರಗ್ಸ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರು ನೈಜೀರಿಯಾ ದೇಶದವರಾಗಿದ್ದು ಓರ್ವ ಬಿಸಿನೆಸ್ ವಿಸಾದಲ್ಲಿ ಮತ್ತೋರ್ವ ಟೂರಿಸ್ಟ್ ವಿಸಾದಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದ ಎನ್ನಲಾಗಿದೆ. ಅಮೃತಹಳ್ಳಿ ಮತ್ತು ಜಕ್ಕೂರು ಬಳಿ ಇಬ್ಬರನ್ನ ಬಂಧಿಸಲಾಗಿದೆ. ಈ ಕುರಿತು ಅಮೃತಹಳ್ಳಿ ಮತ್ತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
Key words: Two- foreign -drug peddlers –arrest- Bangalore






