ಕೊಡಗು,ಜನವರಿ,17,2026 (www.justkannada.in): ಈಜಲು ಹೋಗಿದ್ದ ಹೊಳೆಗೆ ಇಳಿದಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನಲ್ಲಿ ನಡೆದಿದೆ.
ಕುಶಾಲನಗರದ ಗರಗಂದೂರು ಬಳಿ ಈ ದುರಂತ ಸಂಭವಿಸಿದೆ. ಮೊಹಮ್ಮದ್ ರಹೀಜ್ (16) ಹಾಗೂ ಮೊಹಮ್ಮದ್ ನಿಹಾರ್ (16) ಮೃತಪಟ್ಟ ಬಾಲಕರು. ಮೃತರು ಸುಂಟಿಕೊಪ್ಪದ ಪಂಪ್ ಹೌಸ್ ನಿವಾಸಿಗಳು ಎನ್ನಲಾಗಿದೆ. ಇಬ್ಬರು ಬಾಲಕರು ಈಜುವ ಸಲುವಾಗಿ ಹೊಳೆಗೆ ಇಳಿದಿದ್ದರು.
ಈ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಘಟನ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: Two boys, swimming, drowned, Death







