Sunday, September 27, 2026

BDA Apartments

Home Crime ಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ: ರೂ.5 ಲಕ್ಷ ಮೌಲ್ಯದ 9 ದ್ವಿಚಕ್ರವಾಹನ ವಶಕ್ಕೆ.

ಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ: ರೂ.5 ಲಕ್ಷ ಮೌಲ್ಯದ 9 ದ್ವಿಚಕ್ರವಾಹನ ವಶಕ್ಕೆ.

ಮೈಸೂರು,ಜುಲೈ,5,2022(www.justkannada.in): ಮೈಸೂರು ನಗರದ ಕೃಷ್ಣರಾಜ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ದ್ವಿಚಕ್ರವಾಹನ ಕಳ್ಳರನ್ನ ಬಂಧಿಸಿ ಸುಮಾರು ರೂ.5 ಲಕ್ಷ ಮೌಲ್ಯದ 9 ದ್ವಿಚಕ್ರವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರೋಪಿಗಳು ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿದ್ದ ರೂ. 5,00,000 ರೂ. ಮೌಲ್ಯದ ವಿವಿಧ ಮಾದರಿಯ 09 ದ್ವಿ ಚಕ್ರ ವಾಹನಗಳನ್ನು  ವಶಕ್ಕೆ ಪಡೆದಿದ್ದಾರೆ. ಈ ಪತ್ತೆ ಕಾರ್ಯದಿಂದ ಮೈಸೂರು ನಗರ ಕೃಷ್ಣರಾಜ ಪೊಲೀಸ್ ಠಾಣೆಯ- 1. ನಜರ್‌ ಬಾದ್-6 ದೇವರಾಜ – 1, ಲಷ್ಕರ್ ಠಾಣೆಯ – 1 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.ಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ arrest

ಮೈಸೂರು ನಗರದ ಡಿ.ಸಿ.ಪಿ ಗೀತ, ಎಂ.ಎಸ್. ಹಾಗೂ ಕೃಷ್ಣರಾಜ ವಿಭಾಗದ ಎ.ಸಿ.ಪಿ ಗಂಗಾಧರಸ್ವಾಮಿ, ಎಸ್.ಇ. ಮಾರ್ಗದರ್ಶನದಲ್ಲಿ ಕೃಷ್ಣರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ ಪೆಕ್ಟರ್ ಎನ್.ವಿ.ಮಹೇಶ್, ಪಿ.ಎಸ್.ಐಗಳಾದ ಮಂಜು ಸಿ.ಆರ್ (ಅಪರಾಧ),. ಮಹಾವೀರ್(ಕಾ&ಸು) ಎ.ಎಸ್.ಐ ಚಂದ್ರನಾಯಕ್‌ ಹಾಗೂ ಸಿಬ್ಬಂದಿಗಳಾದ ಮೊಖದ್ದರ್ ಷರೀಪ್, ಸಂದೇಶ್ ಕುಮಾರ್, ಸಿದ್ದರಾಮ ಪೂಜಾರಿ, ಮಧು, ಶ್ರೀನಿವಾಸ್ ಪ್ರಸಾದ್ ಈ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.

Key words: Two- bike-thieves- arrested-mysore