ಡಿಕೆಶಿ ಮತ್ತು ರಮ್ಯಾ ನಡುವೆ ಟ್ವಿಟ್ ವಾರ್: ಹೈಕಮಾಂಡ್ ಖಡಕ್ ವಾರ್ನಿಂಗ್.

ಬೆಂಗಳೂರು,ಮೇ,13,2022(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ನಟಿ ರಮ್ಯಾ ನಡುವೆ ನಡೆದ ಟ್ವಿಟ್  ವಾರ್ ಗೆ ಕಾಂಗ್ರೆಸ್ ಹೈಕಾಂಡ್ ಬ್ರೇಕ್ ಹಾಕಿದ್ದು ಖಡಕ್ ಸಂದೇಶ ರವಾನೆ ಮಾಡಿದೆ ಎನ್ನಲಾಗಿದೆ.

ಈ ಸಂಬಂಧ ಪಕ್ಷದ  ನಾಯಕರಿಗೆ ಕಾಂಗ್ರೆಸ್ ಹಿರಿಯ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಬಹಿರಂಗ ಹೇಳಿಕೆ, ಟ್ವಿಟ್ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ವಿಷಯ ಇಲ್ಲಿಗೆ ನಿಲ್ಲಿಸಿ, ಪ್ರಕರಣ ವಿಷಯತಾಂತರವಾಗುತ್ತಿದೆ. ಟ್ವೀಟ್ ಗೆ ಪ್ರತಿಕ್ರಿಯಿಸಬೇಡಿ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಸಂದೇಶ ಪಕ್ಷಕ್ಕೆ ಹಾನಿ ಮಾಡುವಂತ ಕೆಲಸ  ಸಹಿಸುವುದಿಲ್ಲ. ಡಿಕೆ ಶಿವಕುಮಾರ್ ವಿರುದ್ಧ ಮಾತನಾಡದಂತೆ ರಣದೀಪ್ ಸುರ್ಜೇವಾಲಾ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Tweet war -between –DK Shivakumar –Ramya-High Command -Warning.