Sunday, September 20, 2026

BDA Apartments

ಟಿವಿ, ಫ್ರಿಡ್ಜ್ ಬಡವರು ಇಡಬಾರ್ದಾ…? ಸಚಿವ ಉಮೇಶ್ ಕತ್ತಿಗೆ ಶಾಸಕ ಎಂ.ಪಿ ರೇಣುಕ...
Home Front Page ಟಿವಿ, ಫ್ರಿಡ್ಜ್ ಬಡವರು ಇಡಬಾರ್ದಾ…? ಸಚಿವ ಉಮೇಶ್ ಕತ್ತಿಗೆ ಶಾಸಕ ಎಂ.ಪಿ  ರೇಣುಕಾಚಾರ್ಯ ಟಾಂಗ್…

ಟಿವಿ, ಫ್ರಿಡ್ಜ್ ಬಡವರು ಇಡಬಾರ್ದಾ…? ಸಚಿವ ಉಮೇಶ್ ಕತ್ತಿಗೆ ಶಾಸಕ ಎಂ.ಪಿ  ರೇಣುಕಾಚಾರ್ಯ ಟಾಂಗ್…

ಬೆಂಗಳೂರು,ಫೆಬ್ರವರಿ,16,2021(www.justkannada.in): ಟಿವಿ ಫ್ರಿಡ್ಜ್, ಬೈಕ್ ಇರುವವರಿಗೆ ರೇಷನ್ ಕಾರ್ಡ್ ರದ್ದು ಮಾಡುತ್ತೇವೆ ಎಂದು ಹೇಳಿಕೆ ನೀಡಿ ಮತ್ತೆ ಆ ನಿರ್ಧಾರವನ್ನ ವಾಪಸ್ ಪಡೆದ ಆಹಾರ ಸಚಿವ ಉಮೇಶ್ ಕತ್ತಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.jk

ವಿಧಾನಸೌಧದಲ್ಲಿ ಇಂದು ಈ ಬಗ್ಗೆ ಮಾತನಾಡಿದ ಶಾಸಕ ಎಂ.ಪಿ ರೇಣುಕಚಾರ್ಯ,  ಉಮೇಶ ಕತ್ತಿ, IAS ಲಾಬಿಯೋ ಗೊತ್ತಿಲ್ಲ. ನಮ್ಮದು ಬಡವರ,  ಶೋಷಿತರ ಪರವಾದ ಸರ್ಕಾರ. ಈ ರೀತಿಯ ದ್ವಂದ್ವ ಹೇಳಿಕೆಗಳನ್ನು ನೀಡಬಾರದು. ಮನೋರಂಜನೆಗಾಗಿ,  ದೇಶದ ಪ್ರಸ್ತುತ ವಾತಾವರಣ,  ಧಾರವಾಹಿಗಾಗಿ ಟಿವಿ ಉಪಯೋಗಿಸ್ತಾರೆ. ಟಿವಿ ಪಿಡ್ಜ್ ಬಡವರು ಇಡಬಾರ್ದಾ…? ಎಂದು ಹೇಳಿದರು.TV-fridge- poor –MLA- MP Renukacharya- Tong - Minister Umesh katti

ಉಮೇಶ್ ಕತ್ತಿ ಅರ್ಥ ಮಾಡ್ಕೋಬೇಕು. ಬಡವರ ಕಾರ್ಡ್ ರದ್ದು ಮಾಡಲು ಬಿಡಲ್ಲ . ಕತ್ತಿ ಹೇಳಿಕೆ ಸರ್ಕಾರದ ಹೇಳಿಕೆ ಅಲ್ಲ. ಬೇಕಿದ್ದರೇ ನಕಲಿ ಕಾರ್ಡ್ ರದ್ದು ಮಾಡಲಿ ಎಂದು ಎಂ.ಪಿ ರೇಣುಕಾಚಾರ್ಯ ಸಲಹೆ ನೀಡಿದರು.

Key words: TV-fridge- poor –MLA- MP Renukacharya- Tong – Minister Umesh katti