Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಸಿಎಂ ಬಿ.ಎಸ್ ಯಡಿಯೂರಪ್ಪರನ್ನ ಹಾಡಿ ಹೊಗಳಿದ ಜೆಡಿಎಸ್ ಶಾಸಕ…..

ಸಿಎಂ ಬಿ.ಎಸ್ ಯಡಿಯೂರಪ್ಪರನ್ನ ಹಾಡಿ ಹೊಗಳಿದ ಜೆಡಿಎಸ್ ಶಾಸಕ…..

ತುಮಕೂರು.ಜ,24,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ನಂಬಿಕಸ್ಥರು ಕೊಟ್ಟ ಮಾತನ್ನ ಉಳಿಸಿಕೊಳ್ಳುವ ದಿಟ್ಟ ನಾಯಕರು ಎಂದು ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಹಾಡಿಹೊಗಳಿದರು.

ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಬಿಎಸ್ ವೈ ಭರವಸೆ ಹಿನ್ನೆಲೆ ಈ ಬಗ್ಗೆ ಮಾತನಾಡಿದ ಜೆಡಿಎಸ್ ಶಾಸಕ  ಎಸ್.ಆರ್ ಶ್ರೀನಿವಾಸ್,  ಬಿಎಸ್ ವೂ ನಂಬಿಕಸ್ಥರು ಕೊಟ್ಟ ಮಾತು ಉಳಿಸಿಕೊಳ್ಳುವ ದಿಟ್ಟ ನಾಯಕರು. ಸದ್ಯ ಬಿಎಸ್ ವೈ ಗೆ ತಾತ್ಕಾಲಿಕ ಹಿನ್ನಡೆಯಾಗಿರಬಹುದು. ಹೈಕಮಾಂಡ್ ಟೈಟ್ ಮಾಡಿರಬಹುದು. ಆದರೇ ಎಷ್ಟೇ ಕಷ್ಟ ಬಂದರೂ ಸಿಎಂ ಬಿಎಸ್ ಯಡಿಯೂರಪ್ಪ ಕೊಟ್ಟ ಮಾತು ಈಡೇರಿಸುತ್ತಾರೆ. ಅಂತಹ ದಿಟ್ಟ ನಾಯಕತ್ವ ಅವರಲ್ಲಿದೆ ಎಂದು ಗುಣಗಾನ ಮಾಡಿದರು.

ಪಕ್ಷ ಬಿಟ್ಟು ಹೋದವರ ಕುರಿತು ವ್ಯಂಗ್ಯವಾಡಿದ ಶಾಸಕ ಎಸ್. ಆರ್ ಶ್ರೀನಿವಾಸ್, ಮಂತ್ರಿಯಾಗಲೆಂದೇ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಮಂತ್ರಿಯಾಗದಿದ್ದರೇ ಅವರ ಜೀವ  ಹೋಗಿಬಿಡುತ್ತದೆ. ಅವರಿಗೆ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.

Key words: tumakur-CM BS Yeddyurappa- praised -JDS MLA.