ತಿರುಪತಿ ತಿಮ್ಮಪ್ಪನ 15,938 ಕೋಟಿ ಠೇವಣಿ, 10,258.37 ಕೆಜಿ ಚಿನ್ನದ ಒಡೆಯ: ಶ್ವೇತಪತ್ರ ಬಿಡುಗಡೆ ಮಾಡಿದ ಟಿಟಿಡಿ

ಬೆಂಗಳೂರು, ನವೆಂಬರ್ 06, 2022 (www.justkannada.in): ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶ್ರೀ ವೆಂಕಟೇಶ್ವರ ಸ್ವಾಮಿಗೆ ಸಂಬಂಧಿಸಿದ ಚಿನ್ನ ಮತ್ತು ನಗದು ಮುಂತಾದ ಆಸ್ತಿಗಳ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಿದೆ.

ಎಲ್ಲ ಬ್ಯಾಂಕ್‌ಗಳಲ್ಲಿ ರೂ. 15,938 ಕೋಟಿ ಠೇವಣಿ, 10,258.37 ಕೆಜಿ ಚಿನ್ನವಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ತಿಳಿಸಿದೆ.

ಮೂರು ವರ್ಷಗಳಲ್ಲಿ ಶ್ರೀವಾರಿಯ ನಗದು ಠೇವಣಿ ಅಗಾಧವಾಗಿ ಏರಿಕೆಯಾಗಿದೆ. ಟಿಟಿಡಿ ಠೇವಣಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಭದ್ರತೆಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂಬ ಪ್ರಚಾರ ಸುಳ್ಳು ಎಂದು ಟಿಟಿಡಿ ಹೇಳಿದೆ.

ಸೆಪ್ಟೆಂಬರ್ 30/2022 ಬ್ಯಾಂಕ್ಗಳಲ್ಲಿನ ಒಟ್ಟು ಠೇವಣಿ 15,938, 68 ಕೋಟಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5358.11 ಕೋಟಿ
ಯೂನಿಯನ್ ಬ್ಯಾಂಕ್ – 1694.25 ಕೋಟಿ
ಬ್ಯಾಂಕ್ ಆಫ್ ಬರೋಡಾ- 1839.36 ಕೋಟಿ
ಕೆನರಾ ಬ್ಯಾಂಕ್‌ನ 1351 ಕೋಟಿ ರೂ
ಆಕ್ಸಿಸ್ ಬ್ಯಾಂಕ್ – 1006.20 ಕೋಟಿ
HDFC ಲಿಮಿಟೆಡ್ 2122.85 ಕೋಟಿ
ಭಾರತ ಸರ್ಕಾರದ ಬಾಂಡ್‌ಗಳು-555.17 ಕೋಟಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ 660.43 ಕೋಟಿ
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 306.31 ಕೋಟಿ
ಇಂಡಿಯನ್ ಬ್ಯಾಂಕ್ 101.43 ಕೋಟಿ
ಐಸಿಐಸಿಐ ಬ್ಯಾಂಕ್ 9.70 ಕೋಟಿ
ಸಪ್ತಗಿರಿ ಗ್ರಾಮೀಣ ಬ್ಯಾಂಕ್ 99.91 ಕೋಟಿ
ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ 18.54 ಕೋಟಿ
ಸೆಂಟ್ರಲ್ ಬ್ಯಾಂಕ್ 1.28 ಕೋಟಿ
ಕರೂರ್ ವೈಶ್ಯ ಬ್ಯಾಂಕ್ 4.37 ಕೋಟಿ
ಎಪಿ ರಾಜ್ಯ ಹಣಕಾಸು ನಿಗಮ 4.00 ಕೋಟಿ ರೂ
ಎಪಿ ರಾಜ್ಯ ಸಹಕಾರಿ ಬ್ಯಾಂಕ್ 1.30 ಕೋಟಿ

ವಿವಿಧ ಬ್ಯಾಂಕ್ಗಳಲ್ಲಿ ಶ್ರೀವಾರಿಯ ಚಿನ್ನದ ಠೇವಣಿ ಒಟ್ಟು 10,258.37 ಕೆ.ಜಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 9819.38 ಕೆ.ಜಿ
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 438.99 ಕೆ.ಜಿ