Sunday, September 27, 2026

BDA Apartments

ಕಾಂಡಂಚಿನ ಪ್ರದೇಶದಲ್ಲಿ ಆನೆ ತುಳಿದು ವ್ಯಕ್ತಿ ಸಾವು BDA JK_Adv BDA Adv
Home Front Page ಕಾಂಡಂಚಿನ ಪ್ರದೇಶದಲ್ಲಿ ಆನೆ ತುಳಿದು ವ್ಯಕ್ತಿ ಸಾವು

ಕಾಂಡಂಚಿನ ಪ್ರದೇಶದಲ್ಲಿ ಆನೆ ತುಳಿದು ವ್ಯಕ್ತಿ ಸಾವು

ಚಾಮರಾಜನಗರ,ನವೆಂಬರ್,05,2020(www.justkannada.in) : ಹೊಂಗಲವಾಡಿ ಗ್ರಾಮದ ವ್ಯಕ್ತಿಯೊಬ್ಬರು ಕಾಡಾನೆ ತುಳಿತದಿಂದ ಮೃತಪಟ್ಟಿದ್ದಾರೆ.jk-logo-justkannada-logo

ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಕಾಡಂಚಿನ ಪ್ರದೇಶದಲ್ಲಿ ಗುರುಸ್ವಾಮಿ ಮೃತದೇಹ ಪತ್ತೆಯಾಗಿದೆ.

ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಸ್ಥಳೀಯರು ಆಗ್ರಹ

ಚಾಮರಾಜನಗರ ತಾಲೂಕಿನ ಹೊಂಗಲವಾಡಿ ಗ್ರಾಮದ ಗುರುಸ್ವಾಮಿ(61) ಮೃತರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಸ್ಥಳೀಯರು ಆಗ್ರಹಿಸಿದ್ದಾರೆ.

ಜಾನುವಾರುಗಳನ್ನು ಮೇಯಿಸಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ 

ಅರಣ್ಯದೊಳಕ್ಕೆ ಜಾನುವಾರುಗಳನ್ನು ಮೇಯಿಸಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಗುರುಸ್ವಾಮಿ ಬುಧವಾರ ರಾತ್ರಿ ಮನೆಗೆ ಬಾರದೇ ಇದ್ದಾಗ ಬೆಳಗ್ಗೆ ಹುಡುಕಾಟ ನಡೆಸಿದ್ದಾರೆ. ಕಾಡಂಚಿನ ಪ್ರದೇಶದಲ್ಲಿ ಗುರುಸ್ವಾಮಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

trunk,area,Elephant,Tossing,person,death

key words : trunk-area-Elephant-Tossing-person-death