ಜನರಿಗೆ ಕಷ್ಟ ಬರುವಾಗ ಇಂಜಿನ್ ಆಫ್ ಆಗುತ್ತೆ: ಇದು ಡಬಲ್ ಇಂಜಿನ್ ಸರ್ಕಾರದ ಸಮಸ್ಯೆ- ಶಾಸಕ ಯುಟಿ ಖಾದರ್ ಲೇವಡಿ.

ಬೆಂಗಳೂರು,ಫೆಬ್ರವರಿ,15,2023(www.justkannada.in): ಜನರಿಗೆ ಕಷ್ಟ ಬರುವಾಗ ಇಂಜಿನ್ ಆಫ್ ಆಗುತ್ತೆ.  ಇದು ಡಬಲ್ ಇಂಜಿನ್ ಸರ್ಕಾರದ ಸಮಸ್ಯೆ ಎಂದು ಕಾಂಗ್ರೆಸ್ ಶಾಸಕ ಯುಟಿ ಖಾದರ್ ಲೇವಡಿ ಮಾಡಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಶಾಸಕ ಯುಟಿ ಖಾದರ್, ಡಬಲ್ ಇಂಜಿನ್ ಸರ್ಕಾರದಲ್ಲಿ ಜನರಿಗೆ ಕಷ್ಟ ಬಂದಾಗಲೇ ಇಂಜಿನ್ ಆಫ್ ಆಗುತ್ತದೆ. ಯಾರದ್ದೂ ಇಂಜಿನ್ ವರ್ಕ್ ಆಗಲ್ಲ. ನರಳಾಡಿ ಸತ್ತವನು ಸತ್ತ, ಬದುಕಿದವನಯ ಬದುಕಿದ ಎಂದು ಕಿಡಿಕಾರಿದರು.

ಡಬಲ್ ಇಂಜಿನ್ ನ  ಇಂಧನ ಕೋಮುವಾದದ ಇಂಧನ. ಇಂಜಿನ್ ನಿಂದ ಬರುವ ಹೊಗೆ ಸಮಾಜ ಒಡೆಯುವ ವಿಷಕಾರಿ ಹೊಗೆ. ಭ್ರಷ್ಟಾಚಾರದಿಂದಲೇ ಇಂಜಿನ್ ತಯಾರು ಮಾಡಲಾಗಿದೆ ಎಂದು ಯುಟಿ ಖಾದರ್ ವಾಗ್ದಾಳಿ ನಡೆಸಿದರು.

Key words: trouble-engine- turns off-people-proble-MLA-UT Khader