ಮಂಡ್ಯ,ಫೆಬ್ರವರಿ,3,2026 (www.justkannada.in): ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಚಂದ್ರವನ ಆಶ್ರಮದ ತ್ರಿನೇತ್ರ ಮಹಂತ ಸ್ವಾಮೀಜಿ ಜಲಯೋಗದಲ್ಲಿ ಅಪೂರ್ವ ಸಾಧನೆ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಜಲಯೋಗದಲ್ಲಿ ಹಲವು ಸಂಕೀರ್ಣ ಮುದ್ರಾಭಂಗಿಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ ತ್ರಿನೇತ್ರ ಮಹಂತ ಸ್ವಾಮೀಜಿ ಅವರ ಸಾಧನೆಗೆ ಜಾಗತಿಕ ವಿಶ್ವ ದಾಖಲೆ (GWR) ಸಂಸ್ಥೆ ವಿಶ್ವದಾಖಲೆ ಗೌರವ ನೀಡಿ, ಪದಕ ಹಾಗೂ ಪ್ರಮಾಣಪತ್ರವನ್ನು ವಿತರಿಸಿದೆ.
ಗಂಟೆಗಟ್ಟಲೆ ನೀರಿನ ಮೇಲೆ ಯೋಗದ ಸಹಾಯದಿಂದ ಮಲಗಿ ವಿವಿಧ ಆಸನಗಳನ್ನು ಪ್ರದರ್ಶಿಸಿದ ತ್ರಿನೇತ್ರ ಮಹಂತ ಸ್ವಾಮೀಜಿ ಅವರ ಈ ಆಳವಾದ ಜಲಯೋಗಾಸನವು ವಿಶ್ವದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದೆ. ವಿಶೇಷ ಕಾರ್ಯಕ್ರಮವೊಂದರಲ್ಲಿ GWR ಸಂಸ್ಥೆಯಿಂದ ಗೌರವ ಸ್ವೀಕರಿಸಿದ ಸ್ವಾಮೀಜಿ, ಈ ವಿಶ್ವ ದಾಖಲೆಯನ್ನು ತಮ್ಮ ಭಕ್ತರಿಗೆ ಸಮರ್ಪಿಸಿದ್ದಾರೆ.
ಜಲಯೋಗದಲ್ಲಿ ಸಿದ್ಧಹಸ್ತರಾದ ತ್ರಿನೇತ್ರ ಮಹಂತ ಸ್ವಾಮೀಜಿಯವರ ಈ ಸಾಧನೆ, ಯೋಗ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.
Key words: Trinetra Mahant Swamiji, achievement, water yoga, world record







