ತಮಿಳುನಾಡು ವಿಧಾನ ಸಭೆ ಅಧಿವೇಶನದಲ್ಲಿ ಅಪ್ಪುಗೆ ಗೌರವ: ವಿಡೀಯೋ ವೈರಲ್

ಬೆಂಗಳೂರು, ಜನವರಿ 08, 2022 (www.justkannada.in): ತಮಿಳುನಾಡು ವಿಧಾನ ಸಭೆಯ ಮೊದಲ ಅಧಿವೇಶನದಲ್ಲಿ ಅಪ್ಪುಗೆ ಗೌರವ ಸಲ್ಲಿಸಲಾಗಿದೆ.

ಹೌದು.  ಅಪ್ಪು ನಿಧನರಾದಾಗ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಂತಾಪವನ್ನು ಸೂಚಿಸಿದ್ದರು, ಈಗ ವಿಧಾನಸಭೆಯಲ್ಲಿ ಗೌರವ ಸಲ್ಲಿಸಿರುವುದು ವಿಶೇಷವಾಗಿದೆ.

ತಮಿಳುನಾಡಿನ ಅಧಿವೇಷನ ಬುಧವಾರ ಆರಂಭವಾಗಿತ್ತು. ಈ ಅಧಿವೇಶನದಲ್ಲಿ ಮೊದಲ ದಿನವೇ ಪುನೀತ್ ಬಗ್ಗೆ ಮಾತನಾಡಿದ್ದು, ಗೌರವ ಸಲ್ಲಿಸಲಾಗಿತ್ತು. ಆ ವೀಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿದೆ.

ಅಪ್ಪು ಬಗ್ಗೆ ಎಂಕೆ ಸ್ಟಾಲಿನ್ ಮೊದಲು ಬಾರೀ ದುಖಃದಿಂದ ಪತ್ರವನ್ನು ಬರೆದಿದ್ದರು.