ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಅಪ್ಪಾಜಿಗೌಡ ಅವರಿಗೆ ಸನ್ಮಾನ.

ಮೈಸೂರು,ಮಾರ್ಚ್,8,2024(www.justkannada.in): ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ನಡೆದ ಸರ್ಟಿಫಿಕೇಟ್ ಕೋರ್ಸ್ ಗಳ ಉದ್ಘಾಟನಾ ಸಮಾರಂಭದಲ್ಲಿ, ನಿವೃತ್ತಿ ಹೊಂದಲಿರುವ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ  ಡಾ.ಅಪ್ಪಾಜಿ ಗೌಡ ಅವರನ್ನು ಸನ್ಮಾನಿಸಲಾಯಿತು.

ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪ್ರೊ.ಎ.ಎಚ್.ಎಂ. ವಿಜಯಲಕ್ಷ್ಮಿ, ಪರೀಕ್ಷಾಂಗ ವಿಭಾಗದ ನಿಯಂತ್ರಕ ಡಾ.ತೋಯಜಾಕ್ಷ, ಶೈಕ್ಷಣಿಕ ಡೀನ್ ಡಾ.ಶ್ರೀಪಾದ್,  ಅಧ್ಯಾಪಕ ಕಾರ್ಯದರ್ಶಿ ಡಾ. ರವಿಶಂಕರ್ ಡಿಕೆ, ವ್ಯವಸ್ಥಾಪಕಿ ಆರ್. ಮೀನಾಕ್ಷಿ, ಅಧ್ಯಾಪಕರಾದ ನಂದಕುಮಾರ್, ಡಾ.ಕೆಂಡಗಣ್ಣೇಗೌಡ ಸಿ.ಎಸ್,  ವನಿತಾ, ಮಮತಾ, ವಿದ್ಯಾರ್ಥಿಗಳಾದ ಶರಣ್ಯ, ಸಿಂಚನಾ ಹಲವರು ಉಪಸ್ಥಿತರಿದ್ದರು.

Key words: Tribute – Dr. Appajigowda- Director of College Education –Department-mysore