ಕೊಡವರ ಕುಲಶಾಸ್ತ್ರ ಅಧ್ಯಯನ ಆದೇಶವನ್ನೇ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕರು ಬುಡಮೇಲು ಮಾಡಿದ್ದಾರೆ- ಎನ್.ಯು.ನಾಚಪ್ಪ ಆರೋಪ.

ಮೈಸೂರು,ಸೆಪ್ಟಂಬರ್,29,2021(www.justkannada.in): ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶವಿದ್ದರೂ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕರು ಅದನ್ನ ಮಾಡದೇ ದ್ರೋಹ ಮಾಡ್ತಿದ್ದಾರೆ. ಸರ್ಕಾರದ ಆದೇಶವನ್ನೇ ಬುಡಮೇಲು ಮಾಡಿದ್ದಾರೆ ಎಂದು ಕೊಡವ ನ್ಯಾಷನಲ್‌ ಕೌನ್ಸಿಲ್ ಮುಖ್ಯಸ್ಥ ಎನ್.ಯು.ನಾಚಪ್ಪ ಆರೋಪ ಮಾಡಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎನ್.ಯು.ನಾಚಪ್ಪ, ನ್ಯಾಯಸಮ್ಮತವಾಗಿ ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ಮನವಿ ಮಾಡಲಾಗಿತ್ತು. ಕೊಡವ ಬುಡಕಟ್ಟು ಸಮುದಾಯಕ್ಕೆ ಎಸ್ಟಿ ಸ್ಥಾನಾಮಾನ ನೀಡುವಂತೆ ಸಾಕಷ್ಟು ಮನವಿ ಮಾಡಲಾಗಿದೆ. ಅದರಂತೆ ಸರ್ಕಾರ 5 ಮಾನದಂಡಗಳ ಮೂಲಕ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶ ನೀಡಿತ್ತು.

ಈ ಕೆಲಸವನ್ನ ಸಮಾಜ ಕಲ್ಯಾಣ ಇಲಾಖೆಯು ಬುಡಕಟ್ಟು ಸಂಶೋಧನಾ ಸಂಸ್ಥೆಗೆ ವಹಿಸಿತ್ತು. ಆದರೆ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕರು ಸರ್ಕಾರದ ಆದೇಶವನ್ನೇ ಬುಡಮೇಲು ಮಾಡಿದ್ದಾರೆ. ಕುಲಶಾಸ್ತ್ರ ಅಧ್ಯಯನ ನಡೆಯುವ ಬದಲು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಧ್ಯಯನ ಮಾಡಲು ಮುಂದಾಗಿದ್ದಾರೆ. ಈ‌ ಮೂಲಕ ಕೊಡವ ವಿರೋಧಿ ಗೌಪ್ಯ ಕಾರ್ಯಸೂಚಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ. ಸರ್ಕಾರದ ಕಣ್ಣೊರೆಸಲು ಆಳವಾದ ಅಧ್ಯಯನ ಮಾಡುವ ನಾಟಕವಾಡುತ್ತಿದ್ದಾರೆ. ಕೊಡವರ ಕುಲಶಾಸ್ತ್ರಕ್ಕೆ ಆದೇಶವಿದ್ದರೂ ಅದನ್ನ ಮಾಡದೇ ದ್ರೋಹ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

Key words: Tribal Research Institute – Director – uprooted – study – genealogy –Kodava-NU Nachappa -mysore