• Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Search
Wednesday, September 17, 2025
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
vtu
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Home Front Page ರೈತರ ಖಾತೆಗೆ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನ ವರ್ಗಾವಣೆ..
  • Front Page
  • News
  • Politics

ರೈತರ ಖಾತೆಗೆ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನ ವರ್ಗಾವಣೆ..

By
JK Desk
-
02/06/2022
Facebook
Twitter
Pinterest
WhatsApp

    ಬೆಂಗಳೂರು, ಜೂನ್,2,2022(www.justkannada.in): ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಜ್ಯದ 47.83 ಲಕ್ಷ ರೈತರಿಗೆ 956.71 ಕೋಟಿ ರೂ.ಗಳ ಆರ್ಥಿಕ ಸಹಾಯಧನ ವರ್ಗಾಯಿಸಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅವರಿಂದು ರೈತರ ಖಾತೆಗಳಿಗೆ ಸಹಾಯಧನ ವರ್ಗಾಯಿಸಿದ್ದು, 2018-19  ರಿಂದ 2021-22 ರವರೆಗೆ ಭಾರತ ಸರ್ಕರದಿಂದ ಅನುಮೋದಿಸಲ್ಪಟ್ಟ ರೈತ ಕುಟುಂಬಗಳಿಗೆ ಒಟ್ಟು 3864.66 ಕೋಟಿ ರೂ. ರಾಜ್ಯದ ರೈತರಿಗೆ ಪಾವತಿಯಾದಂತಾಗಿರುತ್ತದೆ.2021-22 ನೇ ಸಾಲಿನಲ್ಲಿ 50.35 ಲಕ್ಷ ರೈತರಿಗೆ 1975.12 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ.

    ಈ ಯೋಜನೆಯಡಿ ಎಲ್ಲಾ ಪಾವತಿಗಳನ್ನು ಸಾಧ್ಯವಾದಷ್ಟು ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಮಾಡಲಾಗಿದೆ. ದೇಶದ ಎಲ್ಲಾ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯವು ಅತಿಹೆಚ್ಚು ಅಂದರೆ 96% ರಷ್ಟು ಆಧಾರ್ ಆಧಾರಿತ ಪಾವತಿಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ರಾಜ್ಯವಾಗಿದ್ದು, ಕಳೆದ ಬಾರಿ 2020-21 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯದ ಕೃಷಿಇಲಾಖೆಗೆ ಪ್ರಶಸ್ತಿಯು ಲಭಿಸಿದೆ.

    2019 ರಿಂದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಅರ್ಹ ರೈತರಿಗೆ ಹೆಚ್ಚುವರಿಯಾಗಿ 4 ಸಾವಿರ ರೂ.ಗಳ ಆರ್ಥಿಕ ನೆರವನ್ನು ಎರಡು ಕಂತುಗಳಲ್ಲಿ  ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ  ನೀಡುತ್ತಿದೆ. ಆಧಾರ್ ಗುರುತಿನ ಸಂಖ್ಯೆಯಾಧಾರದ ಮೇಲೆ ನೇರ ನಗದು ವರ್ಗಾವಣೆ ಪ್ರಕ್ರಿಯೆ ಮೂಲಕ ರೈತರ ಖಾತೆಗೆ  ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.

    ಈ ಸಂದರ್ಭದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ್, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ, ಕೃಷಿ ಇಲಾಖೆ ಆಯುಕ್ತ ಶರತ್, ನಿರ್ದೇಶಕಿ ನಂದಿನಿಕುಮಾರಿ ,  ಜಲಾನಯನ ಇಲಾಖೆ ಆಯುಕ್ತ ಡಾ. ವೆಂಕಟೇಶ್, ನಿರ್ದೇಶಕ ಶ್ರೀನಿವಾಸ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

    Key words: Transfer – subsidy – farmers-account – Kisan Samman-CM Basavaraja bommai

    • TAGS
    • CM Basavaraja Bommai
    • kisan samman
    • Transfer - subsidy – farmers-account
    Facebook
    Twitter
    Pinterest
    WhatsApp
      Previous articleಬಿಜೆಪಿಯವರ ಜಾಹೀರಾತು ರಾಜ್ಯಕ್ಕೆ ಅವಮಾನ –ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ.
      Next articleಸಿದ್ದರಾಮಯ್ಯ ಸುತ್ತಲೂ ಭಯೋತ್ಪಾದಕತೆಗೆ ಬೆಂಬಲ ಕೊಡುವವರೇ ತುಂಬಿಕೊಂಡಿದ್ದಾರೆ- ಶಾಸಕ ಸಿ.ಟಿ ರವಿ ಆರೋಪ.
      JK Desk

      RELATED ARTICLESMORE FROM AUTHOR

      ಕೃಷ್ಣಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಆದ್ಯತೆ: ರೈತರಿಗೆ ಪರಿಹಾರ ಕುರಿತು ತೀರ್ಮಾನ-ಸಿಎಂ ಸಿದ್ದರಾಮಯ್ಯ

      ಕೇರಳ ಸಿಎಂ ಭೇಟಿ: ಕಾಸರಗೋಡು ಕನ್ನಡಿಗರ ಸಮಸ್ಯೆ ಶೀಘ್ರ ಪರಿಹಾರಕ್ಕೆ ಮನವಿ

      ಮೈಸೂರು ದಸರಾ ಉದ್ಘಾಟನೆ ವಿಚಾರದಲ್ಲಿ ವಿಷ ಬೀಜ ಬಿತ್ತಲು ಯತ್ನ: ಹೈಕೋರ್ಟ್  ಕಪಾಳ ಮೋಕ್ಷ ಮಾಡಿದೆ-ಹೆಚ್.ಎ ವೆಂಕಟೇಶ್

      Sponsor Ads 1

      Sponsor Ads 2

      Sponsor Ads 3

      Sponsor Ads 4

      EDITOR PICKS

      BREAKING NOW: ಉದಯಗಿರಿ “ ಪ್ರಚೋಧನಕಾರಿ ಪೋಸ್ಟ್‌ “: ಜಾಮೀನು ಕೋರಿ ಕೋರ್ಟ್‌ ಮೊರೆ...

      13/02/2025

      5 ವರ್ಷದಲ್ಲಿ 20 ಲಕ್ಷ ಉದ್ಯೋಗ : ನೂತನ ಕೈಗಾರಿಕಾ ನೀತಿ ಬಿಡುಗಡೆ ಮಾಡಿದ...

      11/02/2025

      ಜಾಗತಿಕ ಹೂಡಿಕೆದಾರರ ಸಮಾವೇಶ : 12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಸಚಿವ ಎಂ...

      11/02/2025

      POPULAR POSTS

      ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

      30/03/2020

      ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

      16/06/2019

      ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ...

      05/01/2021

      POPULAR CATEGORY

      • Front Page44222
      • News44206
      • Politics25853
      • Crime4126
      • Cinema3582
      • Sports1348
      • Tenders454
      • Media Masala410
      Just Kannada
      ABOUT US
      Just Kannada is a global platform for all issues related to Kannada. At the very root, it’s a news-driven portal. Everything that’s happening in Karnataka, or whatever that’s happening anywhere in the world that has any consequence to Karnataka, is updated here every minute.
      Contact us: info@justkannada.in
      • Terms & Conditions
      • Privacy Policy
      • Refund Policy
      • Grievances
      • Statistics
      • Contact

      Copyright © 2017- . All Rights Reserved: Just Kannada - News 24x7 | Hosted by: DIGICUBE SOLUTIONS

      Subscribe to our News Service @ Just Rs. 399/- per Year and Get Daily Updates Directly to Your Mobile Phones     Subscribe Now | Checkout