ಸುಳ್ವಾಡಿ ವಿಷ ಪ್ರಸಾದ ದುರಂತ :  22 ತಿಂಗಳ ಬಳಿಕ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಪುನಾರಂಭ

ಚಾಮರಾಜನಗರ, ಅಕ್ಟೋಬರ್,22,2020 : ಜಿಲ್ಲೆಯ ಹನೂರು ತಾಲೂಕಿನ ವಿಷ ಪ್ರಸಾದ ದುರಂತದ ಬಳಿಕ ಮುಚ್ಚಲಾಗಿದ್ದ ಕಿಚ್ಚುಗುತ್ತಿ ಮಾರಮ್ಮ ದೇವಾಲಯ 22 ತಿಂಗಳ ಬಳಿಕ ಬುಧವಾರ ಪುನಾರಂಭಗೊಂಡಿದೆ. ದುರಂತದ ಹಿನ್ನೆಲೆಯಲ್ಲಿ ಪಾಪ ಪ್ರಾಯಶ್ಚಿತ, ಹೋಮ, ಹವನ, ಕುಂಭಾಭಿಷೇಕ ಸೇರಿದಂತೆ 4 ದಿನಗಳ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಬುಧವಾರ ನಡೆಸಲಾಯಿತು.jk-logo-justkannada-logo

ಮುಜರಾಯಿ ಇಲಾಖೆ ಆದೇಶದ ಮೇರೆಗೆ ದೇವಾಲಯ ಪುನಾರಂಭ

ಮೊದಲ ದಿನ ದೇವಾಲಯ ಹಾಗೂ ಆವರಣ ಶುಚಿಗೊಳಿಸಿ ತಳಿರು ತೋರಣ ಹಾಗೂ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯವನ್ನು ಪುನಃ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಬೇಕು ಎಂಬ ಮುಜರಾಯಿ ಇಲಾಖೆ ಆದೇಶದ ಮೇರೆಗೆ ತೆರೆಯಲಾಯಿತು. ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಿಯೋಜನೆಗೊಂಡಿರುವ ಆರ್ಚಕ ಪ್ರೊ.ಮಲ್ಲಣ್ಣ ನೇತೃತ್ವದ ತಂಡ ಬುಧವಾರದಿಂದ ಶುಕ್ರವಾರವರೆಗೆ ಹೋಮ ಹವನ ಕಾರ್ಯಗಳನ್ನು ನಡೆಸಿಕೊಡಲಿದ್ದಾರೆ.

ಅ. 24ರವರೆಗೆ ವಿಶೇಷ ಪೂಜೆ ಬಳಿಕ ಸಾರ್ವಜನಿಕರಿಗೆ ಪ್ರವೇಶ

tragedy-Sulwadi-poisoning-Maramma-Temple-reopens-after- 22 -months
ಅ.22ರಂದು ಬೆಳಗ್ಗೆ ಪಂಚಗವ್ಯಸಾದನ ಸೇರಿದಂತೆ ನಾನಾ ಪೂಜೆ ಹಾಗೂ ಸಂಜೆ 4.30ರ ಬಳಿಕ ವಾಸ್ತು ರಕ್ಷೋಘ್ನ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ, ಅ.23ರಂದು ಬೆಳಗ್ಗೆ 9.15ಕ್ಕೆ ಪುಣ್ಯಾಹ, ವೇದ, ಸೂಕ್ತಪಾರಾಯಣ ಸೇರಿದಂತೆ ನಾನಾ ಪೂಜೆ ಹಾಗೂ ಅ.24ರಂದು ಬೆಳಗ್ಗೆ 10.45ಕ್ಕೆ ಕುಂಭಾಭಿಷೇಕ ಸೇರಿದಂತೆ ಅಭಿಜನ್‌ ಮುಹೂರ್ತದಲ್ಲಿ 11.20ರಿಂದ 12.15ರೊಳಗೆ ಮಹಾಮಂಗಳಾರತಿ ನಡೆಯಲಿದೆ. 12.30ರ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

ತಾಲೂಕು ಆಡಳಿತ ಸಕಲ ರೀತಿಯಲ್ಲೂ ಸಿದ್ಧತೆ

 

tragedy-Sulwadi-poisoning-Maramma-Temple-reopens-after- 22 -months

ಇದಕ್ಕೆ ತಾಲೂಕು ಆಡಳಿತ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ದೇವಸ್ಥಾನಕ್ಕೆ ಸುಣ್ಣ ಬಣ್ಣ ಬಳಿದು, ದೇವಾಲಯ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇನ್ನು ಕಲ್ಯಾಣಿ ಹಾಗೂ ಪ್ರಾಂಗಣ, ಅಡುಗೆ ಕೋಣೆ ಮುಂತಾದವುಗಳನ್ನು ಸಿದ್ಧಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

key words : tragedy-Sulwadi-poisoning-Maramma-Temple-reopens-after- 22 -months