ನಾಳೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಭೀತಿ : ಪರೀಕ್ಷಾ ಕೇಂದ್ರಗಳಿಗೆ ಬೇಗ ತೆರಳುವಂತೆ ಸಿಇಟಿ ಅಭ್ಯರ್ಥಿಗಳಿಗೆ ಸೂಚನೆ.

ಬೆಂಗಳೂರು,ಮೇ,19,2023(www.justkannada.in): ನಾಳೆಯಿಂದ ಎರಡು ದಿನಗಳ ಕಾಲ (ಮೇ 20 ಮತ್ತು 21) ಇಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ನಡೆಯಲಿದೆ. ಈ ಮಧ್ಯೆ ನಾಳೆಯೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭ ಇರುವ ಹಿನ್ನೆಲೆ ಸಿಇಟಿ ಅಭ್ಯರ್ಥಿಗಳಿಗೆ ಟ್ರಾಫಿಕ್ ಸಮಸ್ಯೆ ಬಿಸಿ ತಟ್ಟುವ ಸಾಧ್ಯತೆ ಇದೆ.  ಹೀಗಾಗಿ ಅಭ್ಯರ್ಥಿಗಳು ಬೇಗ ಪರೀಕ್ಷಾ ಕೇಂದ್ರಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಟ್ರಾಫಿಕ್ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಪರೀಕ್ಷಾರ್ಥಿಗಳಿಗೆ ವಿಶೇಷ ಸೂಚನೆಯನ್ನು ನೀಡಿದ್ದಾರೆ. ನಾಳೆ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಹಾಗು ಡಿಸಿಎಂ ಸೇರಿ ಸಚಿವರ ಪ್ರಮಾಣ ವಚನ  ಕಾರ್ಯಕ್ರಮವಿದೆ. ಈ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಅಗಮಿಸುವ ಸಾಧ್ಯತೆ ಇದೆ. ಅದ್ದರಿಂದ ನಗರದ ಹೃದಯಭಾಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನಾಳೆ ನಡೆಯುವ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಬೆಳಗ್ಗೆ 9 ಗಂಟೆಯ ಒಳಗಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು. ಇಲ್ಲವಾದರೆ ಟ್ರಾಫಿಕ್​ನಲ್ಲಿ ಸಿಲುಕುವ ಸಾಧ್ಯತೆ ಇದೆ ಎಂದು ಸಲೀಂ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಅವರು,  ಈ ಬಾರಿ 2.6 ಲಕ್ಷ ವಿಧ್ಯಾರ್ಥಿಗಳು ಸಿಇಟಿ ಪರೀಕ್ಷೆಯನ್ನು ಬರೆಯಲಿದ್ದಾರೆ. ರಾಜ್ಯದಲ್ಲಿ ಒಟ್ಟು 592 ಪರೀಕ್ಷೆ ಸೆಂಟರ್ ​ಗಳಿದ್ದು, ಬೆಂಗಳೂರಿನಲ್ಲಿ ಒಟ್ಟು 122 ಸೆಂಟರ್​ಗಳಿವೆ. ಸುಮಾರು 23 ಸಾವಿರ ಸಿಬ್ಬಂದಿಗಳು ಪರೀಕ್ಷಾ ನಿರ್ವಹಣೆಯ ಕೆಲಸದಲ್ಲಿ ತೊಡಗಲಿದ್ದಾರೆ. ಯಾವುದೇ ಸಮಸ್ಯೆಗಳು ಬಾರದಂತೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಕಂಠೀರವ ಸ್ಟೇಡಿಯಂ ಸುತ್ತ – ಮುತ್ತ ಇರುವ ಪರೀಕ್ಷಾ ಕೇಂದ್ರಗಳ ಮಾಹಿತಿಗಳನ್ನ ವೆಬ್​ ಸೈಟ್​ನಲ್ಲಿ ಹಾಕುತ್ತೇವೆ. ಈ ಸ್ಟೇಡಿಯಂ ಸುತ್ತ – ಮುತ್ತಾ ಸೆಂಟರ್ ​ಗಳಿರುವ ವಿಧ್ಯಾರ್ಥಿಗಳು ಎರಡು ಗಂಟೆಗೂ ಮೊದಲೇ ಬರಬೇಕು” ಎಂದು ರಮ್ಯಾ ತಿಳಿಸಿದ್ದಾರೆ.

8:30 ರ ವೇಳೆಗೆ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಇರಬೇಕು. ಪಿಸಿಎಂ ಬರೆಯುವ ವಿಧ್ಯಾರ್ಥಿಗಳು ಸ್ವಲ್ಪ ಬೇಗ ಬರಬೇಕಾಗಬಹುದು. ಮಧ್ಯಾಹ್ನ ಪರೀಕ್ಷೆಗೆ ಬರುವವರು ಟ್ರಾಫಿಕ್ ನಲ್ಲಿ ಸಿಕ್ಕಿಕೊಳ್ಳುವ ಸಾಧ್ಯಾತೆಗಳು ಹೆಚ್ಚು ಎಂಬುದನ್ನು ಗಮನಿಸಬೇಕು.ಎಲ್ಲೆ ಟ್ರಾಫಿಕ್ ಸಮಸ್ಯೆ ಇದ್ದರೂ ಹಾಲ್ ಟಿಕೇಟ್ ತೋರಿಸಿ ನೀವು ಸೆಂಟರ್​ ಗಳನ್ನ ತಲುಪಬಹುದು. ರೋಡ್ ​ಗಳು ಕ್ಲೋಸ್ ಆಗಿದ್ದರೂ ಟ್ರಾಫಿಕ್ ಪೋಲಿಸರು ಅನುವು ಮಾಡಿಕೊಡ್ತಾರೆ. ಆದರೇ ಹಾಲ್ ಟಿಕೆಟ್ ಕಡ್ಡಾಯವಾಗಿ ತೋರಿಸಬೇಕಾಗುತ್ತದೆ. ಪೋಷಕರಿಗೂ ಜನಸಂದಣಿಯಿಂದ ಬಿಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Key words: Traffic -problem – Bangalore –tomorrow- CET -aspirants – exam centers